HomeLatest NewsBREAKING: ಮಗನಿಂದಲೇ ತಂದೆ, ತಾಯಿ, ಸಹೋದರಿಯ ಬರ್ಬರ ಹತ್ಯೆ

BREAKING: ಮಗನಿಂದಲೇ ತಂದೆ, ತಾಯಿ, ಸಹೋದರಿಯ ಬರ್ಬರ ಹತ್ಯೆ

ವಿಜಯನಗರ: ಮಗನೇ ತಂದೆ, ತಾಯಿ ಹಾಗೂ ಸಹೋದರಿ ಮೂವರನ್ನು ಹತ್ಯೆಗೈರುವ ಘಟನೆ ವಿಜಯನಗರದಲ್ಲಿ ನಡೆದಿದೆ.

ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಮಗನೇ ತನ್ನ ತಂದೆ, ತಾಯಿ ಹಾಗೂ ಸಹೋದರಿಯನ್ನು ಕೊಲೆಗೈದು ಬಳಿಕ ಬೆಗಳೂರಿಗೆ ಪರಾರಿಯಾಗಿದಾನೆ.

ಕೊಲೆ ಬಳಿಕ ಬೆಂಗಳೂರಿಗೆ ಬಂದ ಆರೋಪಿ, ತಿಲಕನಗರ ಠಾಣೆಯಲ್ಲಿ ತಂದೆ, ತಾಯಿ, ಸಹೋದರಿ ಮೂವರು ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದಾನೆ. ಬಳಿಕ ಪೊಲೀಸರು ಆತನನ್ನು ವಿಚಾರಿಸಿದ್ದಾಗ ತಾನೇ ಮೂವರನ್ನು ಕೊಲೆಗೈದಿರುವುದಾಗಿ ಅಸ್ಪಷ್ಟವಾಗಿ ಮಾಹಿತಿ ನೀಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ತಾನೇ ತಂದೆ, ತಾಯಿ, ಸಹೋದರಿ ಮೂವರನ್ನೂ ಕೊಲೆಗೈದು, ಮನೆಯೊಳಗೆ ಹೂತು ಹಾಕಿದ್ದಾಗಿ ಒಮ್ಮೆ ಹೇಳಿಕೆ ನೀಡಿದ್ದಾನೆ. ಮತ್ತೊಮ್ಮೆ ಸಂಡೂರಿನಲ್ಲಿ ಶವಗಳನ್ನು ಎಸೆದಿದ್ದಾಗಿ ಹೇಳಿದ್ದಾನೆ. ಮಗನೇ ಪೋಷಕರು ಹಾಗೂ ಸಹೋದರಿ ಮೂವರನ್ನು ಕೊಲೆಗೈದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಈ ಬಗ್ಗೆವ್ ತಿಲಕನಗರ ಠಾಣೆ ಪೊಲೀಸರು ಕೊಟ್ಟೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಶವಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular