HomeEntertainmentಸೋನಭದ್ರ ಮಾಲ್‌ನಲ್ಲಿ ಪತ್ನಿಯ ಅಬ್ಬರ: ಪ್ರೇಯಸಿ ಜೊತೆ ಶಾಪಿಂಗ್ ಮಾಡುತ್ತಿದ್ದ ಪತಿಗೆ ಸರಿಯಾದ ಶಾಸ್ತಿ

ಸೋನಭದ್ರ ಮಾಲ್‌ನಲ್ಲಿ ಪತ್ನಿಯ ಅಬ್ಬರ: ಪ್ರೇಯಸಿ ಜೊತೆ ಶಾಪಿಂಗ್ ಮಾಡುತ್ತಿದ್ದ ಪತಿಗೆ ಸರಿಯಾದ ಶಾಸ್ತಿ

ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ರಾಬರ್ಟ್ಸ್‌ಗಂಜ್ ಪ್ರದೇಶದ ಶಾಪಿಂಗ್ ಮಾಲ್ ಒಂದು ಶನಿವಾರ ಸಂಜೆ ಹೈಡ್ರಾಮಾಗೆ ಸಾಕ್ಷಿಯಾಯಿತು. ತನ್ನ ಪತಿಯು ಮತ್ತೊಬ್ಬ ಮಹಿಳೆಯೊಂದಿಗೆ ಶಾಪಿಂಗ್ ಮಾಡುತ್ತಿರುವುದನ್ನು ಕಂಡು ಪತ್ನಿಯು ರೊಚ್ಚಿಗೆದ್ದು ನಡೆಸಿದ ಗಲಾಟೆಯ ವಿಡಿಯೋ ಈಗ ವೈರಲ್ ಆಗಿದೆ.

ಘಟನೆಯ ವಿವರ: ಶನಿವಾರ ಸಂಜೆ ಯುವಕನೊಬ್ಬ ತನ್ನ ಪ್ರೇಯಸಿಯೊಂದಿಗೆ ಸಿವಿಲ್ ಲೈನ್ಸ್ ರಸ್ತೆಯಲ್ಲಿರುವ ಮಾಲ್‌ಗೆ ಶಾಪಿಂಗ್ ಮಾಡಲು ಬಂದಿದ್ದನು. ಅನಿರೀಕ್ಷಿತವಾಗಿ ಅದೇ ಸಮಯದಲ್ಲಿ ಆತನ ಪತ್ನಿಯೂ ಮಾಲ್‌ಗೆ ಬಂದಿದ್ದಳು. ಪತಿಯು ಇನ್ನೊಬ್ಬ ಮಹಿಳೆಯ ಜೊತೆ ಇರುವುದನ್ನು ಕಂಡ ಆಕೆ, ಮಾಲ್‌ನ ಒಳಗೇ ಸಾರ್ವಜನಿಕವಾಗಿ ಆಕ್ಷೇಪ ವ್ಯಕ್ತಪಡಿಸಿದಳು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡ ಪತಿ ಅಲ್ಲಿಂದ ಜಾಣತನದಿಂದ ಪರಾರಿಯಾದನು.

15 ನಿಮಿಷಗಳ ಕಾಲ ನಡೆದ ‘ಕ್ಯಾಟ್ ಫೈಟ್’: ಪತಿ ಪರಾರಿಯಾದ ನಂತರ ಇಬ್ಬರು ಮಹಿಳೆಯರ ನಡುವೆ ಮಾತಿನ ಚಕಮಕಿ ಆರಂಭವಾಗಿ, ಅದು ದೈಹಿಕ ಜಗಳಕ್ಕೆ ತಿರುಗಿತು. ಸುಮಾರು 15 ನಿಮಿಷಗಳ ಕಾಲ ಇಬ್ಬರೂ ಮಹಿಳೆಯರು ಪರಸ್ಪರ ಕೂದಲು ಹಿಡಿದು ಎಳೆದಾಡುತ್ತಾ, ಹೊಡೆದಾಡಿಕೊಂಡಿದ್ದಾರೆ. ಮಾಲ್‌ನ ಸಿಬ್ಬಂದಿ ಮತ್ತು ಇತರ ಗ್ರಾಹಕರು ಇಬ್ಬರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಗಲಾಟೆ ನಿಂತಿರಲಿಲ್ಲ. ಈ ಘಟನೆಯನ್ನು ಅಲ್ಲಿರುವವರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೊಲೀಸರ ಮಧ್ಯಸ್ಥಿಕೆ: ವಿಷಯ ತಿಳಿದು ಸ್ಥಳಕ್ಕೆ ಬಂದ ರಾಬರ್ಟ್ಸ್‌ಗಂಜ್ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಈ ಬಗ್ಗೆ ಮಾಹಿತಿ ನೀಡಿದ ಕೊತ್ವಾಲಿ ಪ್ರಭಾರಿ ಇನ್ಸ್‌ಪೆಕ್ಟರ್ ರಾಮಸ್ವರೂಪ್ ವರ್ಮಾ, ನಂತರ ಪತ್ನಿಯು ತನ್ನ ಪತಿಯನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಬಂದಿದ್ದಳು. ತನ್ನ ಪತಿಯು ಮತ್ತೊಬ್ಬ ಮಹಿಳೆಯ ಮೇಲೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾನೆ ಎಂದು ಆಕೆ ದೂರಿದ್ದಾಳೆ. ಪೊಲೀಸರು ಎರಡೂ ಕಡೆಯವರಿಗೆ ಬುದ್ಧಿವಾದ ಹೇಳಿ ಕಳುಹಿಸಿದ್ದು, ಪತಿಗೆ ಎಚ್ಚರಿಕೆ ನೀಡಿ ಬಿಡಲಾಗಿದೆ.

ಈ ಘಟನೆಯು ಸೋನಭದ್ರದಲ್ಲಿ “ಪತಿ, ಪತ್ನಿ ಔರ್ ವೋ” ನಾಟಕದಂತಿದ್ದು, ಸಾರ್ವಜನಿಕವಾಗಿ ಮುಜುಗರಕ್ಕೆ ಕಾರಣವಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular