HomeKarnatakaBIG NEWS: ತಂದೆ ಸಾವಿನಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ದಿವ್ಯಾಂಗ ಮಗ

BIG NEWS: ತಂದೆ ಸಾವಿನಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ದಿವ್ಯಾಂಗ ಮಗ

ದಾವಣಗೆರೆ: ತಂದೆ ಸಾವಿನಿಂದ ತೀವ್ರವಾಗಿ ಮನನೊಂದಿದ್ದ ಮಗ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಳಿಯಲ್ಲಿ ನಡೆದಿದೆ.

ಇಲ್ಲಿನ ಚೀಲಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. 65 ವರ್ಷದ ತಂದೆ ಚಂದ್ರ ನಾಯ್ಕ್ ಮೃತಪಟ್ಟಿದ್ದರು, ತಂದೆ ಸಾವಿನಿಂದ ಮಗ ಶಿವಕುಮಾರ್ (32) ತೀವ್ರವಾಗಿ ಬೇಸರಗೊಂಡಿದ್ದ. ಈಗ ವಿಷ ಸೇವಿಸಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

ದಿವ್ಯಾಂಗನಾಗಿದ್ದ ಮಗ ಶಿವಕುಮಾರ್ ಗೆ ತಂದೆಯೇ ಆಸರೆಯಾಗಿದ್ದರು. ತಂದೆಯ ಅಗಲಿಕೆಯಿಂದ ದಿಕ್ಕೇ ತೋಚದಂತಾಗಿದ್ದ ಶಿವಕುಮಾರ್, ತಾನೂ ಸಾವಿನ ಹಾದಿ ಹಿಡಿದಿದ್ದಾನೆ. ಸ್ಥಳಕ್ಕೆ ಹೊನ್ನಾಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular