HomeLatest NewsBREAKING: ಹೆತ್ತ ತಾಯಿ ಮೇಲೆ ಪೇಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಮಗ!

BREAKING: ಹೆತ್ತ ತಾಯಿ ಮೇಲೆ ಪೇಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಮಗ!

ಕಾಸರಗೋಡು: ಮಗರಾಯನೊಬ್ಬ ಹೆತ್ತ ತಾಯಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಕೊಂದು ಹಾಕಿರುವ ಅಮಾನುಷ ಘಟನೆ ಕಾಸರಗೋಡಿನ ಮಂಜೇಶ್ವರದಲ್ಲಿ ನಡೆದಿದೆ.

ವರ್ಕಾಡಿ ಮೂಲದ ಹೆಲ್ಡಾರ (60) ಮಗನಿಂದಲೇ ಕೊಲೆಯಾದ ಮಹಿಳೆ. ಮೆಲ್ವಿನ್ ತಾಯಿಯನ್ನೇ ಬೆಂಕಿ ಹಚ್ಚಿ ಸುಟ್ಟು ಹಾಕಿದ ಮಗ. ನಿನ್ನೆ ಮಧ್ಯರಾತ್ರಿ 1ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಗಲಾಟೆ ಕೇಳಿ ಮೆಲ್ವಿನ್ ಮೇಲೆ ಅನುಮಾನಗೊಂಡ ಚಿಕ್ಕಮ್ಮ ಮನೆಯಿಂದ ಹೊರ ಬಂದು ನೋಡಿದಾಗ ಮೆಲ್ವಿನ್ ತಾಯಿಯನ್ನೇ ಹತ್ಯೆ ಮಾಡಿ ಬೆಂಕಿ ಹಚ್ಚಿರುವುದು ಕಂಡುಬಂದಿದೆ. ಚಿಕ್ಕಮ್ಮನ ಗಮನಕ್ಕೆ ಬಂದಿದ್ದು ಗೊತ್ತಾಗುತ್ತಿದ್ದಂತೆ ಮೆಲ್ವಿನ್, ಚಿಕ್ಕಮ್ಮ ಲೋಲಿಟಾ ಅವರ ಮೇಲೂ ಹಲ್ಲೆ ನಡೆಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲೋಲಿಟಾ ಕಿರುಚಿಕೊಳ್ಳುತ್ತಿದ್ದಂತೆ ಅಕ್ಕಪಕ್ಕದ ನಿವಾಸಿಗಳು ಹೊರಬಂದಿದ್ದಾರೆ. ನೆರೆಯ ನಿವಾಸಿಗಳು ಬರುತ್ತಿದ್ದಂತೆ ಮೆಲ್ವಿನ್ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳು ಲೋಲಿಟಾ ಅವರನ್ನು ಮಂಗಳೂರಿನ ಯೆನಪೋಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆತ್ತ ತಾಯಿಯನ್ನೇ ಮಗ ಕ್ರೂರವಾಗಿ ಕೊಲ್ಲಲು ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಮಗನ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular