HomeLatest NewsBREAKING: ಹೆತ್ತ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪಾಪಿ ಪುತ್ರ ಅರೆಸ್ಟ್!

BREAKING: ಹೆತ್ತ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪಾಪಿ ಪುತ್ರ ಅರೆಸ್ಟ್!

ಉಡುಪಿ: ಹೆತ್ತ ತಾಯಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿ ಪುತ್ರನನ್ನು ಕೇರಳ ಪೊಲೀಸರು ಉಡುಪಿಯಲ್ಲಿ ಬಂಧಿಸಿದ್ದಾರೆ.

ಮೆಲ್ವಿನ್ ಬಂಧಿತ ಆರೋಪಿ. ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೆಲ್ವಿನ್ ನನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೆಲ್ವಿನ್ ತನ್ನ ತಾಯಿ ಹೆಲ್ಡಾರ (60) ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಕೊಂದು ಹಾಕಿದ್ದ. ಕೇರಳದ ಕಾಸರಗೋಡಿನ ಮಂಜೇಶ್ವರದಲ್ಲಿ ಈ ಘಟನೆ ನಡೆದಿತ್ತು.

ನಿನ್ನೆ ಮಧ್ಯರಾತ್ರಿ 1ಗಂಟೆ ಸುಮಾರಿಗೆ ಮೆಲ್ವಿನ್ ತನ್ನ ತಾಯಿಯನ್ನು ಬೆಂಕಿ ಹಚ್ಚಿ ಸುಟ್ಟು ಹತ್ಯೆ ಮಾದಿದ್ದಾನೆ ಎನ್ನಲಾಗಿದೆ. ಗಲಾಟೆ ಕೇಳಿ ಮೆಲ್ವಿನ್ ಮೇಲೆ ಅನುಮಾನಗೊಂಡ ಚಿಕ್ಕಮ್ಮ ಮನೆಯಿಂದ ಹೊರ ಬಂದು ನೋಡಿದಾಗ ಮೆಲ್ವಿನ್ ತಾಯಿಯನ್ನೇ ಹತ್ಯೆ ಮಾಡಿ ಬೆಂಕಿ ಹಚ್ಚಿರುವುದು ಕಂಡುಬಂದಿದೆ. ಚಿಕ್ಕಮ್ಮನ ಗಮನಕ್ಕೆ ಬಂದಿದ್ದು ಗೊತ್ತಾಗುತ್ತಿದ್ದಂತೆ ಮೆಲ್ವಿನ್, ಚಿಕ್ಕಮ್ಮ ಲೋಲಿಟಾ ಅವರ ಮೇಲೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದಾನೆ.

ಲೋಲಿಟಾ ಕಿರುಚಿಕೊಳ್ಳುತ್ತಿದ್ದಂತೆ ಅಕ್ಕಪಕ್ಕದ ನಿವಾಸಿಗಳು ಹೊರಬಂದಿದ್ದಾರೆ. ನೆರೆಯ ನಿವಾಸಿಗಳು ಬರುತ್ತಿದ್ದಂತೆ ಮೆಲ್ವಿನ್ ಸ್ಥಳದಿಂದ ಪರಾರಿಯಾಗಿದ್ದಾನೆ. ಸುಟ್ಟು ಗಾಯಗೊಂಡಿರುವ ಲೋಲಿಟಾ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆತ್ತ ತಾಯಿಯನ್ನೇ ಮಗ ಕ್ರೂರವಾಗಿ ಕೊಲ್ಲಲು ಕಾರಣ ತಿಳಿದುಬಂದಿಲ್ಲ. ಸದ್ಯ ಆರೋಪಿ ಪುತ್ರನನ್ನು ಬೈಂದೂರು ಬಳಿ ಪೊಲಿಸರು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular