HomeKarnatakaBREAKING : ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ : ಕುಡಿಯಲು ಹಣ ಕೊಡದ ತಾಯಿಗೆ ಚಾಕು...

BREAKING : ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ : ಕುಡಿಯಲು ಹಣ ಕೊಡದ ತಾಯಿಗೆ ಚಾಕು ಇರಿದು ಮಾಂಗಲ್ಯ ಸರ ಕಿತ್ಕೊಂಡ ಪಾಪಿ ಮಗ.!

ಬೆಂಗಳೂರು: ಕುಡಿತದ ದಾಸನಾಗಿದ್ದ ಮಗ ಕುಡಿಯಲು ಹಣ ಕೊಟ್ಟಿಲ್ಲ ಎಂದು ತಾಯಿಯನ್ನೇ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನ ಜ್ಞಾನಭಾರತಿ ವ್ಯಾಪ್ತಿಯಲ್ಲಿ ನಡೆದಿದೆ.

ಜಯಲಕ್ಷ್ಮೀ ಎಂಬ ಮಹಿಳೆ ಗಂಭೀರವಾಗಿ ಹಲ್ಲೆಗೊಳಗಾಗಿದ್ದಾರೆ. ರಾಹುಲ್ ಅಲಿಯಾಸ್ ಕಲರ್ಸ್ ತಾಯಿಗೆ ಚಾಕುವಿನಿಂದ ಇರಿದ ಮಗ. ಕೂಲಿಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಜಯಲಕ್ಷ್ಮೀ ಪುತ್ರ ಕುಡಿತದ ಚಟಕ್ಕೆ ಒಳಗಾಗಿದ್ದ. ಕುಡಿಯಲು ದುಡ್ದು ಕೊಡುವಂತೆ ತಾಯಿಗೆ ಕೇಳಿದ್ದ. ತಾಯಿ ನಿರಾಕರಿಸಿದ್ದಕ್ಕೆ ಜಗಳವಾಡಿದ್ದಾನೆ. ಈ ವೇಳೆ ಚಾಕುವಿನಿಂದ ತಾಯಿಗೆ ಇರಿದು, ಆಕೆಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular