ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಕೊಲೆ ರಹಸ್ಯ: ಕುಡಿತ ಬಿಡದ ಪುತ್ರನ ಉಸಿರು ನಿಲ್ಲಿಸಿದ ತಂದೆ

ಬೆಂಗಳೂರು: ಬೆಂಗಳೂರಿನಲ್ಲಿ ಯೋಗೇಶ್ ಎಂಬಾತನ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕುಡಿತ ಬಿಡಿಸಲಾಗದೆ ತಂದೆ ಪ್ರಕಾಶ್ ಪುತ್ರನನ್ನು ಕೊಲೆ ಮಾಡಿರುವುದು ಗೊತ್ತಾಗಿದೆ.

ಪುತ್ರ ಯೋಗೇಶನ ಕೊಲೆ ಮಾಡಿ ಆತ್ಮಹತ್ಯೆ ಎಂದು ಪ್ರಕಾಶ್ ಬಿಂಬಿಸಿದ್ದಾನೆ. ಮಾರ್ಚ್ 6ರಂದು ಬಸವೇಶ್ವರನಗರದಲ್ಲಿ ಯೋಗೇಶ್ ಕೊಲೆ ಪ್ರಕರಣ ನಡೆದಿತ್ತು. ಸ್ಥಳೀಯರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ನಂತರ ದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು.

ಮರಣೋತ್ತರ ವರದಿಯಲ್ಲಿ ಆತ್ಮಹತ್ಯೆಯಲ್ಲ ಕೊಲೆ ಎಂದು ಉಲ್ಲೇಖವಾಗಿದೆ. ಪುತ್ರ ಯೋಗೇಶ್ ಕುಡಿತದ ಚಟದಿಂದ ಬೇಸತ್ತಿದ್ದ ತಂದೆ ಪ್ರಕಾಶ್ ಕತ್ತು ಬಿಗಿದು ಉಸಿರುಗಟ್ಟಿಸಿ ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ. ಸದ್ಯ ಆರೋಪಿ ಪ್ರಕಾಶ್ ನನ್ನು ಬಂಧಿಸಿ ಬಸವೇಶ್ವರನಗರ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read