HomeLatest Newsಬರೋಬ್ಬರಿ 10 ಸರ್ಕಾರಿ ನೌಕರಿ ಪಡೆದ ಸಾಧಕ...!

ಬರೋಬ್ಬರಿ 10 ಸರ್ಕಾರಿ ನೌಕರಿ ಪಡೆದ ಸಾಧಕ…!

ಒಂದೇ ಒಂದು ಸರ್ಕಾರಿ ಹುದ್ದೆ ಪಡೆಯಲು ಕಷ್ಟಪಡುವ ಈ ದಿನಗಳಲ್ಲಿ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಖಿಳೇಗಾಂವ ಗ್ರಾಮದ ಯುವಕನೊಬ್ಬ ಬರೋಬ್ಬರಿ 10 ಸರ್ಕಾರಿ ನೌಕರಿ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ಧರೆಪ್ಪ ಸಂಗಮೇಶ ನಾಗಗೋಳ(26) ಅವರು 10 ಸರ್ಕಾರಿ ನೌಕರಿ ಪಡೆದುಕೊಂಡವರು. ತಂದೆ ಸಂಗಮೇಶ ಕೂಲಿ ಕಾರ್ಮಿಕರಾಗಿದ್ದು, ತಾಯಿ ಆಶಾ ಕಾರ್ಯಕರ್ತೆಯಾಗಿದ್ದಾರೆ. ಅರ್ಧ ಎಕರೆ ಕೃಷಿ ಭೂಮಿ ಹೊಂದಿದ್ದು, ಇದೇ ಕುಟುಂಬಕ್ಕೆ ಆಧಾರವಾಗಿದೆ.

ಬಡತನ ಇದ್ದರೂ ಬಿಕಾಂ ಪದವಿ ಪೂರ್ಣಗೊಳಿಸಿದ ನಂತರ ಧರೆಪ್ಪ ಖಾಸಗಿ ಬ್ಯಾಂಕ್ ನಲ್ಲಿ ಉದ್ಯೋಗ ಪಡೆದರು. ನಮ್ಮ ಊರಿನಲ್ಲಿ ಬಡವರ ಮಕ್ಕಳು ಸರ್ಕಾರಿ ನೌಕರಿ ಪಡೆದಿಲ್ಲ. ನೀನು ನೌಕರಿ ಪಡೆದು ಮಾದರಿಯಾಗು. ನಾವು ಕಷ್ಟಪಟ್ಟು ಓದಿಸಿದ್ದೇವೆ ಎನ್ನುವ ತಂದೆ ಮಾತಿನಿಂದ ಪ್ರೇರಣೆ ಪಡೆದ ಧರೆಪ್ಪ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿರಂತರ ಅಧ್ಯಯನ ನಡೆಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅವರು 10 ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಸಿವಿಲ್ ಕಾನ್ಸ್ಟೇಬಲ್ 5 ಹುದ್ದೆ, ಎಸ್‌ಡಿಎ 2, ಎಫ್.ಡಿ.ಎ., ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿದ್ದರು. ಎಫ್.ಡಿ.ಎ. ಹುದ್ದೆಯಲ್ಲಿ ಮುಂದುವರೆದಿರುವ ಅವರು ಸದ್ಯ ಉತ್ತರ ಕನ್ನಡ ಜಿಲ್ಲೆ ದಾಂಡೇಲಿ ತಾಲೂಕು ಪಂಚಾಯಿತಿಯಲ್ಲಿ ಜೂನ್ ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಪಿಎಸ್ಐ ಹುದ್ದೆ ಆಯ್ಕೆ ದಾಖಲಾತಿ ಪರಿಶೀಲನೆಯಲ್ಲಿದೆ. ಕೆಎಎಸ್ ಮುಖ್ಯ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗಾಗಿ 2021 ರಲ್ಲಿ ಧಾರವಾಡಕ್ಕೆ ಹೋಗಿದ್ದ ಧರೆಪ್ಪ ಅವರಿಗೆ ಊಟ, ವಸತಿ, ಇತರೆ ಖರ್ಚು ಭರಿಸಲು ಸಾಧ್ಯವಾಗದೆ ಊರಿಗೆ ಮರಳಿ ಸ್ವಂತ ಅಧ್ಯಯನ ನಡೆಸಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular