HomeLatest NewsGOOD NEWS: ಒಂದೇ ಹಾಳೆಯಲ್ಲಿ ಪಹಣಿ, ಆಕಾರಬಂದ್, ಪೋಡಿ ನಕ್ಷೆ, ಮ್ಯುಟೇಶನ್ ವ್ಯವಸ್ಥೆ ಜಾರಿ

GOOD NEWS: ಒಂದೇ ಹಾಳೆಯಲ್ಲಿ ಪಹಣಿ, ಆಕಾರಬಂದ್, ಪೋಡಿ ನಕ್ಷೆ, ಮ್ಯುಟೇಶನ್ ವ್ಯವಸ್ಥೆ ಜಾರಿ

ಬೆಂಗಳೂರು: ಪಹಣಿ, ಆಕಾರಬಂದ್, ಪೋಡಿ ನಕ್ಷೆ, ಮ್ಯುಟೇಶನ್ ದಾಖಲೆಗಳನ್ನು ಒಂದೇ ಹಾಳೆಯಲ್ಲಿ ಒದಗಿಸುವ ವ್ಯವಸ್ಥೆ ಜಾರಿಗೊಳಿಸಲು ಕಂದಾಯ ಇಲಾಖೆಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸರ್ಕಾರದ ವಿವಿಧ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ಭೂ ವ್ಯವಹಾರಗಳಿಗೆ ಪೋಡಿ ನಕ್ಷೆ, ಆಕಾರಬಂದ್ ಮ್ಯುಟೇಶನ್ ದಾಖಲೆ ಅಗತ್ಯವಾಗಿದ್ದು, ಇವೆಲ್ಲವನ್ನೂ ಪ್ರತ್ಯೇಕವಾಗಿ ಪಡೆದುಕೊಳ್ಳಲು ಕಂದಾಯ ಇಲಾಖೆಯ ವಿವಿಧ ಕಚೇರಿಗಳಿಗೆ ಅಲೆದಾಡಬೇಕಿದೆ.

ಈಗ ಪಹಣಿ ಪುಟದ ಹಿಂಭಾಗದಲ್ಲಿಯೇ ಆಕಾರಬಂದ್, ಪೋಡಿ ನಕ್ಷೆ, ಮ್ಯುಟೇಶನ್ ದಾಖಲೆಗಳನ್ನು ಮುದ್ರಿಸಿ ಕೊಡುವ ವ್ಯವಸ್ಥೆ ರೂಪಿಸಲಾಗಿದೆ. ಪ್ರಸ್ತುತ ಒಂದು ಪಹಣಿಗೆ 25 ರೂ. ಶುಲ್ಕ ವಿಧಿಸುತ್ತಿದ್ದು, ಯಾವುದೇ ಹೆಚ್ಚಿನ ಶುಲ್ಕವಿಲ್ಲದೆ ನಾಲ್ಕು ದಾಖಲೆಗಳ ಪತ್ರ ನೀಡಲಾಗುವುದು. ಇದರಿಂದ ರೈತರಿಗೆ ದಾಖಲೆ ಪತ್ರಗಳನ್ನು ಪಡೆಯುವಲ್ಲಿ ಆಗುತ್ತಿರುವ ವಿಳಂಬ ತಪ್ಪುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular