HomeIndiaಸೋಪ್, ಶಾಂಪೂ, ಸೌಂದರ್ಯವರ್ಧಕ, ಟೂತ್ ಪೇಸ್ಟ್ ಗೆ ಹೊಸ ಲೇಬಲಿಂಗ್ ನಿಯಮ: ಸಸ್ಯಾಹಾರಿ ಉತ್ಪನ್ನಗಳಿಗೆ ಹಸಿರು,...

ಸೋಪ್, ಶಾಂಪೂ, ಸೌಂದರ್ಯವರ್ಧಕ, ಟೂತ್ ಪೇಸ್ಟ್ ಗೆ ಹೊಸ ಲೇಬಲಿಂಗ್ ನಿಯಮ: ಸಸ್ಯಾಹಾರಿ ಉತ್ಪನ್ನಗಳಿಗೆ ಹಸಿರು, ಮಾಂಸಾಹಾರಿ ಉತ್ಪನ್ನಗಳಿಗೆ ಕೆಂಪು ಚಿಹ್ನೆ ಕಡ್ಡಾಯ

ನವದೆಹಲಿ: ಸೋಪ್, ಶಾಂಪೂ, ಟೂತ್‌ ಪೇಸ್ಟ್‌ಗೆ ಹೊಸ ಲೇಬಲಿಂಗ್ ನಿಯಮ ಜಾರಿಯಾಗಿದ್ದು, ಸಸ್ಯಾಹಾರಿ ಉತ್ಪನ್ನಗಳಿಗೆ ಹಸಿರು, ಮಾಂಸಾಹಾರಿ ಉತ್ಪನ್ನಗಳಿಗೆ ಕೆಂಪು ಗುರುತು ಕಡ್ಡಾಯಗೊಳಿಸಲಾಗಿದೆ.

ಸೋಪ್‌ ಗಳು ಮತ್ತು ಶಾಂಪೂಗಳಿಂದ ಹಿಡಿದು ಟೂತ್‌ ಪೇಸ್ಟ್ ಹಾಗೂ ಇತರ ಸೌಂದರ್ಯವರ್ಧಕಗಳು ಮತ್ತು ಪ್ರಸಾಧನಗಳವರೆಗೆ, ಇನ್ನು ಮುಂದೆ ಗ್ರಾಹಕರು ಉತ್ಪನ್ನದ ಪ್ಯಾಕೇಜಿಂಗ್ ಮೇಲಿರುವ ಕಡ್ಡಾಯ ಚಿಹ್ನೆಯ ಮೂಲಕ ಅದು ಸಸ್ಯಾಹಾರಿ ಅಥವಾ ಮಾಂಸಾಹಾರಿ ಎಂಬುದನ್ನು ಗುರುತಿಸಲು ಸಾಧ್ಯವಾಗುತ್ತದೆ.

ಈ ಉತ್ಪನ್ನಗಳಿಗೆ ಲೇಬಲಿಂಗ್ ಅವಶ್ಯಕತೆಯನ್ನು ನಿರ್ದಿಷ್ಟಪಡಿಸಲು ಕೇಂದ್ರ ಸರ್ಕಾರವು ‘ಲೀಗಲ್ ಮೆಟ್ರಾಲಜಿ (ಪ್ಯಾಕೇಜ್ಡ್ ಕಮಾಡಿಟೀಸ್) ನಿಯಮಗಳು, 2011’ ಅನ್ನು ತಿದ್ದುಪಡಿ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ತಿದ್ದುಪಡಿಯು ಸೋಮವಾರದಿಂದ ಜಾರಿಗೆ ಬಂದಿದೆ.

ತಿದ್ದುಪಡಿ ಮಾಡಿದ ನಿಯಮಗಳ ಪ್ರಕಾರ, ಸಸ್ಯಾಹಾರಿ ಮೂಲದ ಉತ್ಪನ್ನಗಳು ಹಸಿರು ಚುಕ್ಕೆ (ಡಾಟ್)ಯನ್ನು ಹೊಂದಿರಬೇಕು ಮತ್ತು ಮಾಂಸಾಹಾರಿ ಮೂಲದ ಉತ್ಪನ್ನಗಳು ಕೆಂಪು ಅಥವಾ ಕಂದು ಬಣ್ಣದ ಚುಕ್ಕೆಯನ್ನು ಹೊಂದಿರಬೇಕು.

ಖರೀದಿಯ ಸಮಯದಲ್ಲಿ ಉತ್ಪನ್ನದ ಸ್ವರೂಪವನ್ನು ಗ್ರಾಹಕರು ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ, ಪ್ಯಾಕೇಜ್‌ನ ಮುಖ್ಯ ಪ್ರದರ್ಶನ ಫಲಕದ (ಡಿಸ್‌ಪ್ಲೇ ಪ್ಯಾನಲ್) ಮೇಲ್ಭಾಗದಲ್ಲಿ ಈ ಚಿಹ್ನೆಯನ್ನು ಪ್ರದರ್ಶಿಸಬೇಕು.

 ಈ ಅಧಿಸೂಚನೆಯು ನಿರ್ದಿಷ್ಟವಾಗಿ ಸೋಪ್, ಶಾಂಪೂ, ಟೂತ್‌ಪೇಸ್ಟ್, ಇತರ ಸೌಂದರ್ಯವರ್ಧಕಗಳು ಮತ್ತು ಪ್ರಸಾಧನಗಳನ್ನು ಒಳಗೊಂಡಿದೆ.  (ಚಿತ್ರಕೃಪೆ:ಎಐ)

ನಕಲಿ ಸಿಮ್ ಕಾರ್ಡ್ ವಿತರಣೆ: ದೂರಸಂಪರ್ಕ ಇಲಾಖೆ ಎಚ್ಚರಿಕೆ

ನವದೆಹಲಿ: ನಕಲಿ ಸಿಮ್ ಕಾರ್ಡ್ ವಿತರಣೆ, ಟೆಲಿಕಾಂ ಗುರುತುಗಳ ದುರ್ಬಳಕೆ ಅಥವಾ ‘ಐಎಂಇಐʼ (IMEI) ಸಂಖ್ಯೆಗಳನ್ನು ತಿರುಚುವ ಬಗ್ಗೆ ನಾಗರಿಕರಿಗೆ ದೂರಸಂಪರ್ಕ ಇಲಾಖೆಯ (ಡಿಒಟಿ) ಎಚ್ಚರಿಕೆ ನೀಡಿದೆ.

ದುರುಪಯೋಗ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ. ದಂಡ ವಿಧಿಸಬಹುದು. ತಮ್ಮ ಮೊಬೈಲ್ ಸಂಪರ್ಕಗಳು ಮತ್ತು ಹ್ಯಾಂಡ್‌ಸೆಟ್‌ಗಳನ್ನು ಪರಿಶೀಲಿಸಲು ಮತ್ತು ಸುರಕ್ಷಿತವಾಗಿರಿಸಲು ʻಸಂಚಾರ್ ಸಾಥಿʼ ಪೋರ್ಟಲ್ ಮತ್ತು ಮೊಬೈಲ್ ತಂತ್ರಾಂಶ ಬಳಸಲು ನಾಗರಿಕರಿಗೆ ಸಲಹೆ ನೀಡಲಾಗಿದೆ.

ಮಧ್ಯಪ್ರದೇಶದ ದೂರಸಂಪರ್ಕ ಇಲಾಖೆಯ ಮಧ್ಯಪ್ರದೇಶ ಪರವಾನಗಿ ಕ್ಷೇತ್ರವು (ಎಸ್‌ಎಎಲ್‌) ನಕಲಿ ಸಿಮ್ ವಿತರಣೆಯ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಇತ್ತೀಚಿನ ಸೈಬರ್ ಕ್ರೈಮ್ ತನಿಖೆಗಳ ಪ್ರಕಾರ, ಛತ್ತೀಸ್‌ಗಢದಲ್ಲಿ ಪಾಯಿಂಟ್ ಆಫ್ ಸೇಲ್ (ಪಿಒಎಸ್‌) ಏಜೆಂಟ್ ಒಬ್ಬರು ನಾಗರಿಕರ ಅರಿವು ಅಥವಾ ಒಪ್ಪಿಗೆಯಿಲ್ಲದೆ ಅವರ ಗುರುತಿನ ದಾಖಲೆಗಳನ್ನು ಬಳಸಿ 25 ಮೊಬೈಲ್ ಸಂಪರ್ಕಗಳನ್ನು (ಸಿಮ್‌ಗಳು) ಅಕ್ರಮವಾಗಿ ಸಕ್ರಿಯಗೊಳಿಸಿದ ಪ್ರಕರಣಗಳು ಬೆಳಕಿಗೆ ಬಂದಿವೆ.

ಇದರ ಬೆನ್ನಲ್ಲೇ, ದೂರಸಂಪರ್ಕ ಇಲಾಖೆ ಹಾಗೂ ಟೆಲಿಕಾಂ ಸೇವಾ ಪೂರೈಕೆದಾರರು ಆ ʻಪಿಒಎಸ್‌ʼ ಏಜೆಂಟ್ ಅನ್ನು ತಕ್ಷಣವೇ ಕಪ್ಪುಪಟ್ಟಿಗೆ ಸೇರಿಸಿದ್ದು, ಭವಿಷ್ಯದಲ್ಲಿ ಮೊಬೈಲ್ ಸಂಪರ್ಕಗಳನ್ನು (ಸಿಮ್) ವಿತರಿಸದಂತೆ ನಿರ್ಬಂಧಿಸಲಾಗಿದೆ. ಈ 25 ಮೊಬೈಲ್ ಸಂಪರ್ಕಗಳನ್ನು ಇಲಾಖೆಯ ʻಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್ʼನಲ್ಲಿ (ಡಿಐಪಿ) ಪರಿಶೀಲಿಸಲಾಯಿತು ಮತ್ತು ಅನುಮಾನಾಸ್ಪದ ಎಂದು ಗುರುತಿಸಲಾದ ಸಂಪರ್ಕಗಳನ್ನು ಮರು-ಪರಿಶೀಲನೆಗೆ ಒಳಪಡಿಸಲಾಯಿತು. ಮರು-ಪರಿಶೀಲನೆಯಲ್ಲಿ ವಿಫಲವಾದ ಸಂಖ್ಯೆಗಳನ್ನು ತರುವಾಯ ನಿಷ್ಕ್ರಿಯಗೊಳಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular