HomeKarnatakaಪಕ್ಕದ ಮನೆ ಆಸ್ತಿ ತೆರಿಗೆ ಕಟ್ಟಲು ನೋಟಿಸ್! ರಿಯಲ್ ಎಸ್ಟೇಟ್ ಸಿಎಂ ಸರ್ಕಾರದ ಹೊಸ ವಸೂಲಿ...

ಪಕ್ಕದ ಮನೆ ಆಸ್ತಿ ತೆರಿಗೆ ಕಟ್ಟಲು ನೋಟಿಸ್! ರಿಯಲ್ ಎಸ್ಟೇಟ್ ಸಿಎಂ ಸರ್ಕಾರದ ಹೊಸ ವಸೂಲಿ ಬಿಸಿನೆಸ್: ಆರ್. ಅಶೋಕ್ ಆಕ್ರೋಶ

ಬೆಂಗಳೂರು: ಪಕ್ಕದ ಮನೆ ಆಸ್ತಿ ತೆರಿಗೆ ಕಟ್ಟಲು ನೋಟಿಸ್ ನೀಡಿರುವುದು ರಿಯಲ್ ಎಸ್ಟೇಟ್ ಸಿಎಂ ಸರ್ಕಾರದ ಹೊಸ ವಸೂಲಿ ಬಿಸಿನೆಸ್ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.

ಜಿಬಿಎ (GBA) ಮತ್ತು ಕಾಂಗ್ರೆಸ್ ಸರ್ಕಾರದ ಲೂಟಿ ಮತ್ತು ಎಡವಟ್ಟುಗಳಿಗೆ ಕೊನೆಯಿಲ್ಲವೇ? ತಂತ್ರಜ್ಞಾನದ ಹೆಸರಿನಲ್ಲಿ ಬೆಂಗಳೂರಿನ ನಾಗರಿಕರನ್ನು ಸುಲಿಗೆ ಮಾಡಲು ಹೊರಟಿರುವ ಈ  ಕಾಂಗ್ರೆಸ್ ಸರ್ಕಾರಕ್ಕೆ ನಿಜಕ್ಕೂ ನಾಚಿಕೆಯಾಗಬೇಕು. ಜಿಪಿಎಸ್ ಹಾಗೂ ಡ್ರೋನ್ ಸರ್ವೇ ಹೆಸರಿನಲ್ಲಿ ಜಿಬಿಎ(ಗ್ರೇಟರ್ ಬೆಂಗಳೂರು ಪ್ರಾಧಿಕಾರ) ಅಧಿಕಾರಿಗಳು ಮಾಡಿರುವ ಎಡವಟ್ಟುಗಳು ಒಂದೆರಡಲ್ಲ. ಜನರ ಆಸ್ತಿಯ ಅಳತೆಯನ್ನೇ ಬೇಕಾಬಿಟ್ಟಿ ಹೆಚ್ಚಿಸಿ, ದುಪ್ಪಟ್ಟು ತೆರಿಗೆ ಕಟ್ಟುವಂತೆ ಡಿಮ್ಯಾಂಡ್ ನೋಟಿಸ್ ನೀಡಿ ನಾಗರಿಕರಿಗೆ ನಿತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ನಿಮ್ಮ ‘ಬ್ರಾಂಡ್ ಬೆಂಗಳೂರು’ ಎಂದರೆ ತೆರಿಗೆ ಹೆಸರಿನಲ್ಲಿ ಜನಸಾಮಾನ್ಯರ ಜೇಬಿಗೆ ಕನ್ನ ಹಾಕುವುದು ಮತ್ತು ನಿತ್ಯ ಕಿರುಕುಳ ನೀಡುವುದೇ? ಬೆಂಗಳೂರು ನಗರಾಭಿವೃದ್ಧಿ ಸಚಿವ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೃಷ್ಣ ಬೈರೇಗೌಡ ಅವರೇ, 2,500 ಚದರ ಅಡಿ ಮನೆಗೆ 4,436 ಚದರ ಅಡಿ ಎಂದು ನಮೂದಿಸಿ, ಪಕ್ಕದ ಮನೆಯ ಫೋಟೋ ಲಗತ್ತಿಸಿ 92,000 ರೂ.ಗಳಿಗಿಂತ ಹೆಚ್ಚು ತೆರಿಗೆ ನೋಟಿಸ್ ಕಳುಹಿಸುವುದು ಯಾವ ಸೀಮೆ ಆಡಳಿತ ಸ್ವಾಮಿ ಎಂದು ಪ್ರಶ್ನಿಸಿದ್ದಾರೆ.

ಅನ್ಯಾಯ ಕೇಳಲು ಹೋದರೆ ದಬ್ಬಾಳಿಕೆ: ತಪ್ಪು ನಿಮ್ಮ ಅಧಿಕಾರಿಗಳದ್ದು, ಆದರೆ ಮೇಲ್ಮನವಿ ಸಲ್ಲಿಸಲು ‘ಮೊದಲು ಅರ್ಧದಷ್ಟು ತಪ್ಪಾದ ತೆರಿಗೆಯನ್ನು ಪಾವತಿಸಿ’ ಎಂದು ಬಡ ಹಾಗೂ ಮಧ್ಯಮ ವರ್ಗದ ಜನರನ್ನು ಪೀಡಿಸುತ್ತಿರುವುದು ಅನ್ಯಾಯದ ಪರಮಾವಧಿ. ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವ ಸೌಜನ್ಯವೂ ಇಲ್ಲದೆ, ಜನರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿರುವ ಈ ತುಘಲಕ್ ಆಡಳಿತಕ್ಕೆ ಬೆಂಗಳೂರಿನ ಜನ ಶೀಘ್ರದಲ್ಲೇ ತಕ್ಕ ಪಾಠ ಕಲಿಸಲಿದ್ದಾರೆ. ಡ್ರೋನ್ ಸರ್ವೇ ಹೆಸರಿನಲ್ಲಿ ಜಿಬಿಎ ನೀಡುತ್ತಿರುವ ಈ ನಿರರ್ಥಕ, ಸುಲಿಗೆ ನೋಟಿಸ್ ಸ್ಥಗಿತಗೊಳಿಸಿ, ಸಾರ್ವಜನಿಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಅಶೋಕ್ ಒತ್ತಾಯಿಸಿದ್ದಾರೆ.

ದಲ್ಲಾಳಿಗಳ ಅಡ್ಡಾ ಆದ RTO ಕಚೇರಿಗಳಲ್ಲಿ ಸಾಲು ಸಾಲು ಅಕ್ರಮ: ಆರ್. ಅಶೋಕ್ ಆಕ್ರೋಶ

ನಿವೃತ್ತಿಯ ನಂತರವೂ ಡ್ಯೂಟಿ ನಿಂತಿಲ್ಲ. ಆರ್‌ಟಿಓ(RTO) ಕಚೇರಿಗಳಲ್ಲಿ ಸಾಲು ಸಾಲು ಅಕ್ರಮದಿಂದ ಸಾರಿಗೆ ಇಲಾಖೆಯನ್ನ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ದಲ್ಲಾಳಿಗಳ ಅಡ್ಡಾ ಮಾಡಿದೆ ಎಂದು ಅಶೋಕ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ಯಾವ ಹಂತಕ್ಕೆ ತಲುಪಿದೆ ಎಂದರೆ, ಸರ್ಕಾರಿ ಕಚೇರಿಗಳಲ್ಲಿ ನಿವೃತ್ತರಾದ ನೌಕರರು ಹಾಗೂ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಕುಳಿತು ಅಧಿಕಾರ ಚಲಾಯಿಸುತ್ತಿದ್ದಾರೆ.

ಸಾರಿಗೆ ಇಲಾಖೆಯ ಆರ್‌ಟಿಓ ಕಚೇರಿಗಳಲ್ಲಿ ನಿವೃತ್ತಿ ಹೊಂದಿದ ‘ಡಿ’ ದರ್ಜೆ ಸಿಬ್ಬಂದಿ ಹಾಗೂ ಖಾಸಗಿ ಏಜೆಂಟರುಗಳು ಕುರ್ಚಿ, ಕ್ಯಾಬಿನ್ ಹಾಕಿ ಸರ್ಕಾರಿ ಕಡತಗಳನ್ನು ವಿಲೇವಾರಿ ಮಾಡುತ್ತಿದ್ದರೆ, ಸಾರಿಗೆ ಸಚಿವ ಬೈರತಿ ಸುರೇಶ್ ಅವರೇ ನಿಮ್ಮ ಇಲಾಖೆ ಏನು ನಿದ್ದೆ ಮಾಡುತ್ತಿದೆಯಾ ಅಥವಾ ಈ ದಂಧೆಯಲ್ಲಿ ನಿಮಗೂ ಪಾಲಿದೆಯಾ ಎಂದು ಪ್ರಶ್ನಿಸಿದ್ದಾರೆ.

ನಮ್ಮ ಸರ್ಕಾರದಲ್ಲಿ ‘ಮಧ್ಯವರ್ತಿಗಳಿಗೆ ಜಾಗವಿಲ್ಲ, ಅಕ್ರಮ ಎಸಗಿದರೆ ಅಮಾನತು’, “ಹತ್ತು ರೂಪಾಯಿ ಲಂಚ ಕೇಳಿದರೆ ನನಗೆ ತಿಳಿಸಿ”, ಎಂಬ ಪೊಳ್ಳು ಹೇಳಿಕೆಗಳು, ಆದೇಶಗಳು ಬರಿ ಬೊಗಳೆ ಮಾತಿಗೆ, ಕಾಗದಕ್ಕಷ್ಟೇ ಸೀಮಿತವೇ?  ನಿಮ್ಮ ಮೂಗಿನ ತುದಿಯಲ್ಲೇ ನಿವೃತ್ತ ಸಿಬ್ಬಂದಿ ಹಾಗೂ ಖಾಸಗಿ ವ್ಯಕ್ತಿಗಳು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದರೂ ನೀವು ಕಣ್ಣು ಮುಚ್ಚಿ ಕುಳಿತಿರುವುದು ಯಾರ ಮುಲಾಜಿಗೆ ಎಂದಿದ್ದಾರೆ.

ಸರ್ಕಾರಿ ವ್ಯವಸ್ಥೆಗೆ ಕಳಂಕ: ಅಧಿಕೃತ ಸಿಬ್ಬಂದಿ ಅಭಾವ ನೆಪ ಹೇಳಿ, ನಿವೃತ್ತರನ್ನು ಹಾಗೂ ಖಾಸಗಿ ಮಧ್ಯವರ್ತಿಗಳನ್ನು ಕಚೇರಿಯಲ್ಲಿ ಕೂರಿಸಿ ಸಾರ್ವಜನಿಕರ ಫೈಲ್, ಶುಲ್ಕ ಹಾಗೂ ದಾಖಲೆಗಳನ್ನು ನಿರ್ವಹಿಸಲು ಅವಕಾಶ ನೀಡಿರುವುದು ಕಾನೂನುಬಾಹಿರ ನಡೆ.

ಆನ್‌ಲೈನ್ ಸೇವೆಗೂ ಗ್ರಹಣ: ಲೋಕಾಯುಕ್ತ ದಾಳಿ ವೇಳೆ ಸಿಕ್ಕಿಬಿದ್ದರೂ, ಎಫ್‌ಐಆರ್ ಆದರೂ ಬುದ್ಧಿ ಕಲಿಯದ ಈ ಸರ್ಕಾರ, ಸಾರ್ವಜನಿಕರ ಆನ್‌ಲೈನ್ ಅರ್ಜಿಗಳನ್ನೂ ಪರಿಶೀಲಿಸದೆ ಜನರನ್ನು ಮತ್ತೆ ದಲ್ಲಾಳಿಗಳ ಬಳಿಗೇ ತಳ್ಳುತ್ತಿದೆ. ಸರ್ಕಾರಿ ಕಚೇರಿಗಳನ್ನು ಖಾಸಗಿ ಕಮಿಷನ್ ಏಜೆನ್ಸಿಗಳನ್ನಾಗಿ ಪರಿವರ್ತಿಸಿರುವ ಈ ಭ್ರಷ್ಟ ವ್ಯವಸ್ಥೆಗೆ ತಕ್ಷಣವೇ ಬ್ರೇಕ್ ಹಾಕಬೇಕು. ಆರ್‌ಟಿಓ ಕಚೇರಿಗಳಲ್ಲಿ ನಡೆಯುತ್ತಿರುವ ಈ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಿ, ಶಾಮೀಲಾಗಿರುವ ಹಿರಿಯ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳದಿದ್ದರೆ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular