HomeLatest Newsಹಿಡಿಯುವಾಗಲೇ ಉರಗ ತಜ್ಞನಿಗೆ ಕಚ್ಚಿದ ಹಾವು ; ಶಾಕಿಂಗ್‌ ವಿಡಿಯೋ ವೈರಲ್‌ | Watch

ಹಿಡಿಯುವಾಗಲೇ ಉರಗ ತಜ್ಞನಿಗೆ ಕಚ್ಚಿದ ಹಾವು ; ಶಾಕಿಂಗ್‌ ವಿಡಿಯೋ ವೈರಲ್‌ | Watch

ಹಾವು ರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಖ್ಯಾತ ಯೂಟ್ಯೂಬರ್ ‘ಮುರಳೀವಾಲೆ ಹೌಸ್ಲಾ’ ಅವರಿಗೆ ಲೈವ್ ಕಾರ್ಯಾಚರಣೆಯ ವೇಳೆ ನಾಗರಹಾವು ಕಚ್ಚಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಜಾನ್‌ಪುರದಲ್ಲಿ ನಡೆದಿದೆ.

ಹಾವುಗಳನ್ನು ರಕ್ಷಿಸುವ ಮತ್ತು ಅವುಗಳನ್ನು ಹಿಡಿಯುವ ಮೂಲಕ ಹೆಸರುವಾಸಿಯಾಗಿರುವ ಹೌಸ್ಲಾ ಇಲ್ಲಿಯವರೆಗೂ 8,000ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆ ನಡೆದಿದ್ದು, ಅವರು ವಿಷಕಾರಿ ನಾಗರಹಾವೊಂದನ್ನು ಹಿಡಿಯುವ ಪ್ರಯತ್ನದಲ್ಲಿದ್ದಾಗ. ಕೇವಲ ಮೂರು ಸೆಕೆಂಡುಗಳಷ್ಟು ಚಿಕ್ಕದಾದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೌಸ್ಲಾ ಯೂಟ್ಯೂಬ್‌ನಲ್ಲಿ 15.8 ಮಿಲಿಯನ್‌ಗೂ ಹೆಚ್ಚು ಚಂದಾದಾರರನ್ನು ಹೊಂದಿದ್ದು, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿಯೂ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಹಾವಿನ ಕಡಿತದ ನಂತರ ಅವರ ಸ್ಥಿತಿ ಗಂಭೀರವಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular