HomeEntertainment25 ವರ್ಷಗಳ ಹಿಂದಿನ ತಮ್ಮ ಮೊದಲ ಜಾಹೀರಾತು ಶೇರ್‌ ಮಾಡಿದ ಸ್ಮೃತಿ ಇರಾನಿ; ಇದರಲ್ಲಿದೆ ಮುಟ್ಟಿನ...

25 ವರ್ಷಗಳ ಹಿಂದಿನ ತಮ್ಮ ಮೊದಲ ಜಾಹೀರಾತು ಶೇರ್‌ ಮಾಡಿದ ಸ್ಮೃತಿ ಇರಾನಿ; ಇದರಲ್ಲಿದೆ ಮುಟ್ಟಿನ ನೈರ್ಮಲ್ಯ ಕುರಿತ ಕಾಳಜಿ

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಲವಾರು ವಿಷಯಗಳನ್ನು ಪೋಸ್ಟ್​ ಮಾಡುತ್ತಲೇ ಇರುತ್ತಾರೆ. ತಮ್ಮ ಹಳೆಯ ನೆನಪುಗಳನ್ನು ಅಭಿಮಾನಿಗಳೊಂದಿಗೆ ಶೇರ್​ ಮಾಡುತ್ತಿರುತ್ತಾರೆ.

ಇದೀಗ ಸ್ಮೃತಿ ಇರಾನಿ ಅವರು ತಮ್ಮ ಮೊದಲ ಜಾಹೀರಾತಿನ ವಿಡಿಯೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರಲ್ಲಿ ಮುಟ್ಟಿನ ಬಗ್ಗೆ ಬಹಿರಂಗವಾಗಿ ಮಾತನಾಡುವ ಕುರಿತು ಉಲ್ಲೇಖಿಸಲಾಗಿದೆ. ಮುಟ್ಟಿನ ಕುರಿತು ಜನರು ಹಿಂದೆ ಸರಿಯುತ್ತಿದ್ದ ಸಂದರ್ಭದಲ್ಲಿ 25 ವರ್ಷಗಳ ಹಿಂದೆ ಸ್ಮೃತಿ ಇರಾನಿ ಯಾವುದೇ ಹಿಂಜರಿಕೆಯಿಲ್ಲದೆ ಜಾಹೀರಾತೊಂದನ್ನು ಮಾಡಿದ್ದರು.

ಮುಟ್ಟಿನ ನೈರ್ಮಲ್ಯಕ್ಕೆ ಸಂಬಂಧಿಸಿದ ಜಾಹೀರಾತು ಇದಾಗಿದೆ. ಮುಟ್ಟಿನ ಸಂದರ್ಭದಲ್ಲಿ ಬಳಕೆ ಮಾಡುವ ಸ್ಯಾನಿಟರಿ ಪ್ಯಾಡ್‌ಗಳ ಬಗ್ಗೆ ಮುಕ್ತವಾಗಿ ಮಾತನಾಡುವ ಮೂಲಕ ಸ್ತ್ರೀ ಸಂವೇದನೆಯನ್ನು ಎತ್ತಿ ಹಿಡಿದಿದ್ದಾರೆ. ಇದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ.

For Latest News Updates, Join Our Whatsapp Community🚩
RELATED ARTICLES

Most Popular