HomeEntertainmentಸ್ಯಾಂಡಲ್‌ವುಡ್‌ನಲ್ಲಿ ಸಿಂಪಲ್ ಸುನಿ ಹೊಸ ಕಮಾಲ್: ಇಂದು ಸಂಜೆ 'ಮೋಡ ಕವಿದ ವಾತಾವರಣ' ಚಿತ್ರದ ನಾಯಕನ...

ಸ್ಯಾಂಡಲ್‌ವುಡ್‌ನಲ್ಲಿ ಸಿಂಪಲ್ ಸುನಿ ಹೊಸ ಕಮಾಲ್: ಇಂದು ಸಂಜೆ ‘ಮೋಡ ಕವಿದ ವಾತಾವರಣ’ ಚಿತ್ರದ ನಾಯಕನ ಕ್ಯಾರೆಕ್ಟರ್ ರಿವೀಲ್‌

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಹಂದರ ಹಾಗೂ ವಿಶಿಷ್ಟ ಶೀರ್ಷಿಕೆಗಳ ಮೂಲಕವೇ ಗುರುತಿಸಿಕೊಂಡಿರುವ ನಿರ್ದೇಶಕ ಸಿಂಪಲ್ ಸುನಿ ಈಗ ಮತ್ತೊಂದು ಕುತೂಹಲಕಾರಿ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಸದ್ದು ಮಾಡುತ್ತಿರುವ ಮೋಡ ಕವಿದ ವಾತಾವರಣ ಚಿತ್ರದ ನಾಯಕನ ಫಸ್ಟ್ ಲುಕ್ ಹಾಗೂ ಪಾತ್ರದ ಪರಿಚಯಕ್ಕೆ ದಿನಾಂಕ ನಿಗದಿಯಾಗಿದೆ. ಜೂನ್ 16 ರಂದು ಸಾಯಂಕಾಲ 5:30 ಕ್ಕೆ ಚಿತ್ರತಂಡ ಸಿನಿಮಾದ ನಾಯಕನ ಪಾತ್ರವನ್ನು ಅಧಿಕೃತವಾಗಿ ಪರಿಚಯಿಸಲಿದೆ.

ಖ್ಯಾತ ನಿರ್ಮಾಪಕರ ಬಿಗ್ ಬಜೆಟ್ ಸಿನಿಮಾ ರಾಮ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಅತ್ಯಂತ ಅದ್ಧೂರಿಯಾಗಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಶ್ರೀ ರಂಗರಾಜು, ಮೈಸೂರು ರಮೇಶ್, ಲೋಕೇಶ್ ಬೆಳವಾಡಿ ಹಾಗೂ ಚಳ್ಳಕೆರೆಯ ಗೋವಾ ರಮೇಶ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ದೊಡ್ಡ ತಾರಾಗಣ ಹಾಗೂ ತಾಂತ್ರಿಕ ಶ್ರೀಮಂತಿಕೆಯಿಂದ ಕೂಡಿರುವ ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಚಿತ್ರಕ್ಕೆ ಸ್ವತಃ ಸುನಿ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದು ಆ್ಯಕ್ಷನ್ ಕಟ್ ಹೇಳುತ್ತಿರುವುದು ಸಿನಿಮಾದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚು ಮಾಡಿದೆ.

ಬಲಿಷ್ಠ ತಾರಾಗಣ ಮತ್ತು ತಾಂತ್ರಿಕ ತಂಡ ಈ ಚಿತ್ರದಲ್ಲಿ ಶೀಲಂ ಎಮ್ ಸ್ವಾಮಿ, ಮೋಕ್ಷಾ ಕುಶಾಲ್ ಹಾಗೂ ಸಾತ್ವಿಕಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ತಾಂತ್ರಿಕ ವಿಭಾಗದಲ್ಲೂ ನುರಿತ ತಜ್ಞರು ಕೈಜೋಡಿಸಿದ್ದು, ಪ್ರಸಿದ್ಧ ಛಾಯಾಗ್ರಾಹಕ ಸಂತೋಷ್ ರೈ ಪತಾಜೆ ಕಲರಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದಿ ಅವರ ಸಂಕಲನ ಹಾಗೂ ಮಾಧುರಿ ಪರಶುರಾಮ್ ಅವರ ವಸ್ತ್ರವಿನ್ಯಾಸ ಚಿತ್ರಕ್ಕಿರಲಿದ್ದು, ಪ್ರತಿಯೊಂದು ವಿಭಾಗದಲ್ಲೂ ಸಿನಿಮಾ ಅತ್ಯಂತ ಶ್ರೀಮಂತವಾಗಿ ಮೂಡಿಬರುತ್ತಿದೆ ಎಂಬ ಸುಳಿವು ಸಿಕ್ಕಿದೆ. ಜೂನ್ 16 ರ ಸಂಜೆ ಹೊರಬೀಳಲಿರುವ ನಾಯಕನ ಪಾತ್ರದ ಲುಕ್ ನೋಡಲು ಸಿನಿರಸಿಕರು ಕಾತರರಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular