ಬೆಂಗಳೂರು: ಹೆಚ್ಚುತ್ತಿರುವ ತೂಕ ಮತ್ತು ಹೊಟ್ಟೆಯ ಬೊಜ್ಜು ಇಂದಿನ ಒತ್ತಡದ ಜೀವನಶೈಲಿಯಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅದರಲ್ಲೂ ಸುಡು ಬೇಸಿಗೆಯಲ್ಲಿ ವರ್ಕೌಟ್ ಮಾಡುವುದು ಮತ್ತು ಸರಿಯಾದ ಆಹಾರ ಕ್ರಮ ಪಾಲಿಸುವುದು ಕೊಂಚ ಸವಾಲಿನ ಕೆಲಸವೇ ಸರಿ. ಆದರೆ, ಬೇಸಿಗೆಯಲ್ಲಿ ಲಭ್ಯವಿರುವ ಕೆಲವು ನೈಸರ್ಗಿಕ ಆಹಾರಗಳು ಮತ್ತು ಬೆಳಗಿನ ಸಣ್ಣ ಬದಲಾವಣೆಗಳು ನಿಮ್ಮ ತೂಕ ಇಳಿಕೆಯ ಪ್ರಯಾಣವನ್ನು ಸುಲಭಗೊಳಿಸಬಲ್ಲವು.
ಬೇಸಿಗೆ ಡಯಟ್‌ನಲ್ಲಿ ಇವುಗಳಿಗೆ ಜಾಗವಿರಲಿ:
ಮಾವಿನ ಹಣ್ಣು (ಮಿತವಾಗಿರಲಿ): ಮಾವಿನಲ್ಲಿ ಮೆಗ್ನಿಷಿಯಂ, ಕಬ್ಬಿಣ ಮತ್ತು ಫೈಬರ್ ಅಂಶವಿದ್ದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸಿ ತೂಕ ಇಳಿಸಲು ಸಹಕರಿಸುತ್ತದೆ. ಆದರೆ ನೆನಪಿರಲಿ, ಜ್ಯೂಸ್ ರೂಪಕ್ಕಿಂತ ಹಣ್ಣಿನ ರೂಪದಲ್ಲಿ ಮಿತವಾಗಿ ಸೇವಿಸುವುದು ಉತ್ತಮ.
ಕಲ್ಲಂಗಡಿ ಹಣ್ಣು: ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸಲು ಕಲ್ಲಂಗಡಿ ಅತ್ಯುತ್ತಮ. ಅತಿ ಹೆಚ್ಚು ನೀರಿನ ಅಂಶವಿರುವ ಈ ಹಣ್ಣು ಜೀರ್ಣಕ್ರಿಯೆ ಸುಧಾರಿಸಿ, ಬೊಜ್ಜು ಕರಗಿಸಲು ನೆರವಾಗುತ್ತದೆ.
ನಿಂಬೆಹಣ್ಣಿನ ಮ್ಯಾಜಿಕ್: ನಿಂಬೆರಸವು ತೂಕ ಇಳಿಕೆಯಲ್ಲಿ ಚಮತ್ಕಾರವನ್ನೇ ಮಾಡುತ್ತದೆ. ಒಂದು ಲೋಟ ನೀರಿಗೆ ಅರ್ಧ ನಿಂಬೆಹಣ್ಣಿನ ರಸ ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿದರೆ ದೇಹದ ಉಷ್ಣತೆ ಕಡಿಮೆಯಾಗಿ ತೂಕ ಇಳಿಯುತ್ತದೆ. ಇದು ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಜೀರಿಗೆ ನೀರು: ದಿನವೂ ಖಾಲಿ ಹೊಟ್ಟೆಯಲ್ಲಿ ಎರಡು ಚಮಚ ಜೀರಿಗೆ ಹಾಕಿ ಕುದಿಸಿದ ನೀರನ್ನು ಕುಡಿಯಿರಿ. ಇದು ಜೀರ್ಣಕ್ರಿಯೆ ಹೆಚ್ಚಿಸುವುದಲ್ಲದೆ, ಪದೇ ಪದೇ ಹಸಿವಾಗುವುದನ್ನು ತಡೆಯುತ್ತದೆ.
ಮಜ್ಜಿಗೆ : ತೆಳ್ಳನೆಯ ಮಜ್ಜಿಗೆಗೆ ಒಂದು ಚಿಟಿಕೆ ಇಂಗು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಕುಡಿಯುವುದು ತೂಕ ಇಳಿಕೆಗೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಗೆ ರಾಮಬಾಣ.
ಸೌತೆಕಾಯಿ ಜ್ಯೂಸ್: ವ್ಯಾಯಾಮ ಅಥವಾ ಜಾಗಿಂಗ್ ನಂತರ ಸೌತೆಕಾಯಿ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ತಕ್ಷಣ ಎನರ್ಜಿ ಸಿಗುತ್ತದೆ ಮತ್ತು ಬೊಜ್ಜು ಕರಗಲು ಸಹಕಾರಿಯಾಗುತ್ತದೆ.
ಗ್ರೀನ್ ಟೀ: ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ತೂಕ ನಷ್ಟಕ್ಕೆ ಉತ್ತಮ. ಆದರೆ ನೆನಪಿರಲಿ, ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಅಷ್ಟು ಸೂಕ್ತವಲ್ಲ.
ಸೇಬು ಮತ್ತು ಚಕ್ಕೆ: ಆಪಲ್ ಜ್ಯೂಸ್‌ಗೆ ಅರ್ಧ ತುಂಡು ದಾಲ್ಚಿನಿ (ಚಕ್ಕೆ) ಸೇರಿಸಿ ಕುಡಿಯುವುದರಿಂದ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ ಮತ್ತು ಬೇಗ ಹಸಿವಾಗುವುದಿಲ್ಲ.
ಕಿತ್ತಳೆ ಹಣ್ಣಿನ ರಸ: ವಿಟಮಿನ್ ಸಿ ಸಮೃದ್ಧವಾಗಿರುವ ಕಿತ್ತಳೆ ಜ್ಯೂಸ್ ಜೀರ್ಣಕ್ರಿಯೆಯನ್ನು ಉತ್ತಮಪಡಿಸಿ ಆರೋಗ್ಯಕರವಾಗಿ ತೂಕ ಇಳಿಸಲು ಸಹಾಯ ಮಾಡುತ್ತದೆ.ಕೇವಲ ಡಯಟ್ ಮಾತ್ರವಲ್ಲದೆ, ಸಮತೋಲಿತ ಜೀವನಶೈಲಿ ಮತ್ತು ನಿಯಮಿತ ವ್ಯಾಯಾಮ ನಿಮ್ಮನ್ನು ಫಿಟ್ ಆಗಿರಿಸಲು ಮುಖ್ಯ ಎಂಬುದು ನೆನಪಿರಲಿ

