HomeBusinessಗ್ಯಾಸ್ ಗ್ರಾಹಕರಿಗೆ ಬಿಗ್ ಶಾಕ್: ಇಂದಿನಿಂದ ಅಡುಗೆ ಅನಿಲ ನಿಯಮಗಳು ಕಂಪ್ಲೀಟ್ ಚೇಂಜ್

ಗ್ಯಾಸ್ ಗ್ರಾಹಕರಿಗೆ ಬಿಗ್ ಶಾಕ್: ಇಂದಿನಿಂದ ಅಡುಗೆ ಅನಿಲ ನಿಯಮಗಳು ಕಂಪ್ಲೀಟ್ ಚೇಂಜ್

ಬೆಂಗಳೂರು: ನೀವು ಎಲ್‌ಪಿಜಿ ಸಿಲಿಂಡರ್ ಬಳಸುತ್ತಿದ್ದೀರಾ? ಹಾಗಿದ್ದರೆ ಇಂದಿನಿಂದಲೇ ಜಾರಿಗೆ ಬರುವ ಈ ಹೊಸ ನಿಯಮಗಳನ್ನು ನೀವು ತಿಳಿಯಲೇಬೇಕು. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಮೇ 1, 2026 ರಿಂದ ಅಡುಗೆ ಅನಿಲ ಬಳಕೆಯಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದೆ. ಸಬ್ಸಿಡಿ ದುರುಪಯೋಗಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಈ ಕಠಿಣ ಕ್ರಮಕ್ಕೆ ಮುಂದಾಗಿದೆ.

ಸಿಲಿಂಡರ್ ಬೆಲೆಯಲ್ಲಿ ₹993 ಭಾರಿ ಏರಿಕೆ

ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯಿಂದಾಗಿ ಜಾಗತಿಕ ತೈಲ ಬೆಲೆ ಏರಿಕೆಯಾಗುತ್ತಿದ್ದು, ವಾಣಿಜ್ಯ ಸಿಲಿಂಡರ್ ಬಳಕೆದಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇಂದಿನ ದರ: ಮೇ 1 ರಿಂದ ಜಾರಿಗೆ ಬರುವಂತೆ ಒಟ್ಟು ₹993 ರಷ್ಟು ಭಾರಿ ಬೆಲೆ ಏರಿಕೆ ಕಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಂತ ಹಂತವಾಗಿ ಏರಿಕೆ: ಮಾರ್ಚ್‌ನಲ್ಲಿ ₹31 ವರೆಗೆ, ಏಪ್ರಿಲ್‌ನಲ್ಲಿ ಮೆಟ್ರೋ ನಗರಗಳಲ್ಲಿ ₹218 ರವರೆಗೆ ಹೆಚ್ಚಳ ಕಂಡಿದ್ದ ಬೆಲೆ ಈಗ ಸಾವಿರದ ಗಡಿ ಸಮೀಪಿಸಿದೆ.

ಎಲ್‌ಪಿಜಿ ಮತ್ತು ಪಿಎನ್‌ಜಿ ಒಟ್ಟಿಗೆ ಹೊಂದುವಂತಿಲ್ಲ

ಸಬ್ಸಿಡಿ ಸೌಲಭ್ಯವನ್ನು ಅರ್ಹರಿಗೆ ತಲುಪಿಸಲು ಸರ್ಕಾರ ಈಗ ಡ್ಯುಯಲ್ ಕನೆಕ್ಷನ್ ನಿಷೇಧಿಸಿದೆ.

ಸಂಪರ್ಕ ಕಡಿತ: ಪೈಪ್ಡ್ ಗ್ಯಾಸ್ (PNG) ಹೊಂದಿರುವ ಮನೆಗಳಲ್ಲಿ ಇನ್ನು ಮುಂದೆ ಎಲ್‌ಪಿಜಿ ಸಿಲಿಂಡರ್ ಇಟ್ಟುಕೊಳ್ಳುವಂತಿಲ್ಲ.

ಸಿಲಿಂಡರ್ ವಾಪಸ್: ಅಂತಹ ಗ್ರಾಹಕರು ಕೂಡಲೇ ತಮ್ಮ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಮರಳಿಸಬೇಕು. ಅವರಿಗೆ ಇಂದಿನಿಂದ ರಿಫಿಲ್ ಅಥವಾ ಹೊಸ ಕನೆಕ್ಷನ್ ಸಿಗುವುದಿಲ್ಲ.

ಗಮನಾರ್ಹ ಅಂಶ: ಈಗಾಗಲೇ ದೇಶಾದ್ಯಂತ 43,000ಕ್ಕೂ ಹೆಚ್ಚು ಮಂದಿ ತಮ್ಮ ಎಲ್‌ಪಿಜಿ ಸಂಪರ್ಕವನ್ನು ಹಿಂದಿರುಗಿಸಿದ್ದಾರೆ.

ಒಟಿಪಿ ಕಡ್ಡಾಯ ಮತ್ತು ಬುಕಿಂಗ್ ನಿಯಮ ಬದಲಾವಣೆ
ಇಂಡೇನ್, ಭಾರತ್ ಗ್ಯಾಸ್ ಹಾಗೂ ಹೆಚ್‌ಪಿ ಗ್ಯಾಸ್ ಗ್ರಾಹಕರು ಈ ಕೆಳಗಿನ ಬದಲಾವಣೆಗಳನ್ನು ಗಮನಿಸಬೇಕು:

OTP ಮ್ಯಾಂಡೇಟರಿ: ಸಿಲಿಂಡರ್ ನಿಮ್ಮ ಮನೆ ಬಾಗಿಲಿಗೆ ಬಂದಾಗ ಮೊಬೈಲ್‌ಗೆ ಬರುವ ಒಟಿಪಿ ನೀಡಿದರಷ್ಟೇ ವಿತರಣೆ ಸಾಧ್ಯ.

ಬುಕಿಂಗ್ ಗಡುವು: ನಗರ ಪ್ರದೇಶಗಳಲ್ಲಿ ಗ್ಯಾಸ್ ಬುಕಿಂಗ್ ಅವಧಿಯನ್ನು 25 ದಿನಗಳಿಗೆ ಮತ್ತು ಗ್ರಾಮೀಣ ಭಾಗದಲ್ಲಿ 45 ದಿನಗಳಿಗೆ ವಿಸ್ತರಿಸಲಾಗಿದೆ.

KYC ಕಡ್ಡಾಯ: ಎಲ್ಲಾ ಗ್ಯಾಸ್ ಗ್ರಾಹಕರು ತಮ್ಮ ಕೆವೈಸಿ (KYC) ಅಪ್‌ಡೇಟ್ ಮಾಡುವುದು ಈಗ ಕಡ್ಡಾಯವಾಗಿದೆ.

ಜಾಗತಿಕವಾಗಿ ಇಂಧನ ಪೂರೈಕೆಯಲ್ಲಿ ಏರುಪೇರಾಗುತ್ತಿದ್ದರೂ, ದೇಶೀಯ ಬಳಕೆದಾರರಿಗೆ ಎಲ್‌ಪಿಜಿ ಹಾಗೂ ಪಿಎನ್‌ಜಿ ಪೂರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ಸರ್ಕಾರ ಭರವಸೆ ನೀಡಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular