HomeLatest News'LPG ಗ್ಯಾಸ್' ಸಂಪರ್ಕದ ನಿಯಮಗಳಲ್ಲಿ ಮಹತ್ವದ ಬದಲಾವಣೆ : ಕೇಂದ್ರ ಸರ್ಕಾರದಿಂದ ಹೊಸ ಅಧಿಸೂಚನೆ ಬಿಡುಗಡೆ.!

‘LPG ಗ್ಯಾಸ್’ ಸಂಪರ್ಕದ ನಿಯಮಗಳಲ್ಲಿ ಮಹತ್ವದ ಬದಲಾವಣೆ : ಕೇಂದ್ರ ಸರ್ಕಾರದಿಂದ ಹೊಸ ಅಧಿಸೂಚನೆ ಬಿಡುಗಡೆ.!

ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್‌ಗಳ ವಿಷಯದಲ್ಲಿ ಕೇಂದ್ರ ಸರ್ಕಾರವು ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಪಿಎನ್‌ಜಿ (PNG) ಮತ್ತು ಎಲ್‌ಪಿಜಿ ನಡುವಿನ ತೊಡಕುಗಳನ್ನು ನಿವಾರಿಸಲು ಸರ್ಕಾರವು ಕೆಲವು ನಿಯಮಗಳನ್ನು ಬದಲಿಸಿದೆ. ಇನ್ನು ಮುಂದೆ ಗ್ರಾಹಕರು ಸುಲಭವಾಗಿ ಎಲ್‌ಪಿಜಿ ಸಂಪರ್ಕದಿಂದ ಪಿಎನ್‌ಜಿ ಸಂಪರ್ಕಕ್ಕೆ ಬದಲಾಯಿಸಿಕೊಳ್ಳಬಹುದು. ಈ ಸಂಬಂಧ ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿದೆ.

ಎಲ್‌ಪಿಜಿ ಮತ್ತು ಪಿಎನ್‌ಜಿ ಸಂಪರ್ಕಗಳ ಕುರಿತು ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ‘ಪೆಟ್ರೋಲಿಯಂ ಅನಿಲ ಪೂರೈಕೆ ಮತ್ತು ವಿತರಣಾ ನಿಯಂತ್ರಣ ತಿದ್ದುಪಡಿ ಆದೇಶ 2026’ ಅನ್ನು ಅಧಿಸೂಚಿಸಲಾಗಿದೆ. ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಸಂಪರ್ಕವನ್ನು ಪಡೆಯುವ ದೇಶೀಯ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಈ ನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ.

  • ಎಲ್‌ಪಿಜಿ ರದ್ದತಿ ಮತ್ತು ವರ್ಗಾವಣೆ: ಪಿಎನ್‌ಜಿ ಸಂಪರ್ಕ ಹೊಂದಿರುವ ಎಲ್‌ಪಿಜಿ ಗ್ರಾಹಕರಿಗೆ ಸರ್ಕಾರವು ವಿವಿಧ ಆಯ್ಕೆಗಳನ್ನು ನೀಡಿದೆ. ಪಿಎನ್‌ಜಿ ಸಂಪರ್ಕ ಪಡೆದ 30 ದಿನಗಳ ಒಳಗಾಗಿ ಎಲ್‌ಪಿಜಿ ಸಂಪರ್ಕವನ್ನು ರದ್ದುಗೊಳಿಸಲು ಅರ್ಜಿ ಸಲ್ಲಿಸಬಹುದು. ಭವಿಷ್ಯದಲ್ಲಿ, ಪಿಎನ್‌ಜಿ ಸೌಲಭ್ಯವಿಲ್ಲದ ಪ್ರದೇಶಕ್ಕೆ ಸ್ಥಳಾಂತರಗೊಂಡರೆ, ‘ಟ್ರಾನ್ಸ್‌ಫರ್ ವೋಚರ್’ (Transfer Voucher) ಬಳಸಿ ಎಲ್‌ಪಿಜಿ ಸಂಪರ್ಕವನ್ನು ಪುನಃ ಪಡೆದುಕೊಳ್ಳಬಹುದು ಎಂದು ಕೇಂದ್ರವು ಸ್ಪಷ್ಟಪಡಿಸಿದೆ.
  • ಯಾರಿಗೆ ಲಾಭ?: ಈ ನಿಯಮಗಳು ಪಿಎನ್‌ಜಿ ಸೌಲಭ್ಯವಿಲ್ಲದ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವ ಗ್ರಾಹಕರಿಗೆ ದೊಡ್ಡ ನೆಮ್ಮದಿಯನ್ನು ನೀಡಲಿವೆ. ಆಗಾಗ್ಗೆ ಉದ್ಯೋಗದ ನಿಮಿತ್ತ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆಯಾಗುವ ಉದ್ಯೋಗಿಗಳಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಅಲ್ಲದೆ, ವಲಸೆ ಕುಟುಂಬಗಳು, ಬಾಡಿಗೆದಾರರು ಮತ್ತು ವಿದ್ಯಾರ್ಥಿಗಳಿಗೆ ಈ ನಿರ್ಧಾರವು ಹೆಚ್ಚು ಸಹಕಾರಿಯಾಗಲಿದೆ.
  • ಏಕೆ ಈ ಬದಲಾವಣೆ?: ಎಲ್‌ಪಿಜಿ ಮತ್ತು ಪಿಎನ್‌ಜಿ ಸೇವೆಗಳ ನಡುವೆ ಸುಗಮವಾಗಿ ಬದಲಾಯಿಸಿಕೊಳ್ಳಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಈ ಬದಲಾವಣೆಗಳನ್ನು ಮಾಡಿದೆ. ಅಮೆರಿಕ-ಇರಾನ್ ನಡುವಿನ ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿದೆ. ಇದರಿಂದ ಎಲ್‌ಪಿಜಿ ಅನಿಲ ಪೂರೈಕೆಯಲ್ಲಿ ಅಡಚಣೆ ಉಂಟಾಗಿರುವುದರಿಂದ, ಸರ್ಕಾರವು ಪಿಎನ್‌ಜಿ ಸಂಪರ್ಕಗಳನ್ನು ಉತ್ತೇಜಿಸುತ್ತಿದೆ.
  • ಒಂದೇ ಸಂಪರ್ಕ ಕಡ್ಡಾಯ: ಪಿಎನ್‌ಜಿ ಸಂಪರ್ಕಕ್ಕೆ ಬದಲಾಯಿಸಿಕೊಳ್ಳುವವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಪ್ರೋತ್ಸಾಹಕಗಳನ್ನು ಘೋಷಿಸುತ್ತಿವೆ. ಪಿಎನ್‌ಜಿ ಸಂಪರ್ಕ ಪಡೆದರೆ ಸಬ್ಸಿಡಿಗಳನ್ನೂ ನೀಡಲಾಗುತ್ತಿದೆ. ತೈಲ ಕಂಪನಿಗಳು ಕೂಡ ಹಲವು ಆಫರ್‌ಗಳನ್ನು ನೀಡುತ್ತಿವೆ. ಪಿಎನ್‌ಜಿ ಸಂಪರ್ಕ ಹೊಂದಿರುವವರು ತಮ್ಮ ಎಲ್‌ಪಿಜಿ ಸಂಪರ್ಕಗಳನ್ನು ಸರೆಂಡರ್ ಮಾಡಬೇಕೆಂದು ಕೇಂದ್ರ ಸರ್ಕಾರ ಇತ್ತೀಚೆಗೆ ಆದೇಶಿಸಿತ್ತು. ಒಬ್ಬ ಗ್ರಾಹಕರು ಒಂದೇ ಸಮಯದಲ್ಲಿ ಎರಡು ಸಂಪರ್ಕಗಳನ್ನು ಹೊಂದಿರಬಾರದು ಎಂದು ಸೂಚಿಸಲಾಗಿದೆ.
For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular