HomeKarnatakaBIG NEWS: ಪದವಿ ಪರೀಕ್ಷೆಯಲ್ಲಿ ಅಕ್ರಮ: ಹಣ ಪಡೆದು ಮಾಸ್ ಕಾಪಿಗೆ ಅವಕಾಶ ನೀಡಿದ ಮೇಲ್ವಿಚಾರಕರು

BIG NEWS: ಪದವಿ ಪರೀಕ್ಷೆಯಲ್ಲಿ ಅಕ್ರಮ: ಹಣ ಪಡೆದು ಮಾಸ್ ಕಾಪಿಗೆ ಅವಕಾಶ ನೀಡಿದ ಮೇಲ್ವಿಚಾರಕರು

ಕೋಲಾರ: ಪದವಿ ಪರೀಕ್ಷೆಯಲ್ಲಿ ಹಣ ಪಡೆದು ಮೇಲ್ವಿಚಾರಕರು ವಿದ್ಯಾರ್ಥಿಗಳಿಗೆ ಮಾಸ್ ಕಾಪಿಗೆ ಅವಕಾಶ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಮೊಬೈಲ್, ಬುಕ್ ಇಟ್ಟುಕೊಂಡು ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ ರಾಜಾರೋಷವಾಗಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಮೇಲ್ವಿಚಾರಕರು ಇದನ್ನು ಕಂಡು ಕಾಣದಂತೆ ಇದ್ದಾರೆ.

ಕೋಲಾರದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಪ್ರಾದೇಶಿಕ ಕಚೇರಿಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಅಕ್ರಮ ಬೆಳಕಿಗೆ ಬಂದಿದೆ. ಕೋಲಾರದ ಟಮಕಾ ಬಳಿಯಿರುವ ಮುಕ್ತ ವಿವಿಯ ಪ್ರಾದೇಶಿಕ ಪರೀಕ್ಷಾ ಕೇಂದ್ರದಲ್ಲಿ ಬಿಎ, ಬಿಕಾಂ, ಬಿಸ್ಸಿ ಮತ್ತು ಬಿಬಿಎ ಸೇರಿದಂತೆ ಪ್ರಮುಖ ಪದವಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಂದ ಹಣ ಪಡೆದು ನಕಲು ಮಾಡಲು ಮುಕ್ತ ಅವಕಾಶ ಮಾಡಿಕೊಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಖಾಸಗಿಯಾಗಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನು ಇಲ್ಲಿನ ಪರೀಕ್ಷಾ ಮೇಲ್ವಿಚಾರಕರು ಹಣ ವಸೂಲಿ ಮಾಡುತ್ತಿದ್ದಾರೆ. ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಫೋನ್ ಮತ್ತು ಪುಸ್ತಕಗಳನ್ನು ಕೊಂಡೊಯ್ಯಲು ಒಂದು ಪೇಪರ್​​ಗೆ 1,000 ದಿಂದ 1,500 ರೂಪಾಯಿಗಳವರೆಗೆ ದರ ನಿಗದಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಹಣ ನೀಡಿದ ವಿದ್ಯಾರ್ಥಿಗಳಿಗೆ ಯಾವುದೇ ಭಯವಿಲ್ಲದೆ ಮಾಸ್ ಕಾಪಿ ಮಾಡಲು ಮೇಲ್ವಿಚಾರಕರೇ ಖುದ್ದಾಗಿ ಸಹಕರಿಸುತ್ತಿದ್ದಾರೆ. ಸದ್ಯ ಪರೀಕ್ಷಾ ಕೇಂದ್ರದ ಒಳಗಡೆ ವಿದ್ಯಾರ್ಥಿಗಳಿಂದ ಮೇಲ್ವಿಚಾರಕರಾದ ವಿನೋದ್ ಸಿಂಗ್, ರಾಜೇಂದ್ರ, ಪುನಿತ್ ಮತ್ತು ನಂದಿನಿ ಎಂಬುವವರು ರಾಜಾರೋಷವಾಗಿ ಹಣ ವಸೂಲಿ ಮಾಡುತ್ತಿರುವುದು ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular