HomeKarnatakaಕರ್ನಾಟಕ ಬಜೆಟ್: ತೆರಿಗೆ ಪ್ರಸ್ತಾವನೆ, ವಾಣಿಜ್ಯ ತೆರಿಗೆ ಬಗ್ಗೆ ಮಾಹಿತಿ

ಕರ್ನಾಟಕ ಬಜೆಟ್: ತೆರಿಗೆ ಪ್ರಸ್ತಾವನೆ, ವಾಣಿಜ್ಯ ತೆರಿಗೆ ಬಗ್ಗೆ ಮಾಹಿತಿ

ಬೆಂಗಳೂರು: ಆರ್ಥಿಕ ವರ್ಷ 2025-26ರ ಫೆಬ್ರವರಿ ತಿಂಗಳವರೆಗೆ 74,160 ಕೋಟಿ ರೂ.ಗಳ ಜಿ.ಎಸ್‌.ಟಿ ತೆರಿಗೆ ಸಂಗ್ರಹವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.5.8 ರಷ್ಟು ಹೆಚ್ಚಳವಾಗಿರುತ್ತದೆ. ಮಾರಾಟ ತೆರಿಗೆ ಮತ್ತು ವೃತ್ತಿ ತೆರಿಗೆ ಒಳಗೊಂಡು, ಒಟ್ಟು ವಾಣಿಜ್ಯ ತೆರಿಗೆಯಿಂದ ಫೆಬ್ರವರಿ 2026ರವರೆಗೆ 1,00,462ಕೋಟಿ ರೂ.ಗಳು ಸ್ವೀಕೃತವಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.8.1 ರಷ್ಟು ಹೆಚ್ಚಳವಾಗಿರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ತಿಳಿಸಿದ್ದಾರೆ.

ಕೈಗಾರಿಕೆ ಮತ್ತು ಸಾರಿಗೆ ವಲಯಗಳಿಗೆ ಉತ್ತೇಜನ ನೀಡುವುದರ ಜೊತೆಗೆ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಪರಿಸರ ಸ್ನೇಹಿ ದ್ರವೀಕೃತ ನೈಸರ್ಗಿಕ ಅನಿಲ (LNG) ಮೇಲಿನ ಕರ್ನಾಟಕ ಮಾರಾಟ ತೆರಿಗೆ ದರವನ್ನು ಪ್ರಸ್ತುತ ಇರುವ 14.34% ರಿಂದ 5%ಕ್ಕೆ ಇಳಿಸುವುದಕ್ಕೆ ಪ್ರಸ್ತಾಪಿಸಲಾಗಿದೆ.

ಕರ್ನಾಟಕ ವೃತ್ತಿಗಳ, ಕಸುಬುಗಳ, ಆಜೀವಿಕೆಗಳ ಮತ್ತು ಉದ್ಯೋಗಗಳ ಮೇಲಿನ ತೆರಿಗೆ ಅಧಿನಿಯಮ, 1976ರ ಅಡಿಯಲ್ಲಿ, ತೆರಿಗೆದಾಯಕ ವ್ಯಕ್ತಿಯು ವರ್ಷಕ್ಕೆ ಪಾವತಿಸಬೇಕಾದ ಸಂಪೂರ್ಣ ತೆರಿಗೆಯನ್ನು ಸಲ್ಲಿಸಿದ ಸಂದರ್ಭದಲ್ಲಿ, ಆ ವರ್ಷಕ್ಕೆ ಸಂಬಂಧಿಸಿದ ವಿವರಪಟ್ಟಿಕೆ ಸಲ್ಲಿಸುವ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ತಿದ್ದುಪಡಿ ತರಲಾಗುವುದು. ಇದಲ್ಲದೆ ವೃತ್ತಿ ತೆರಿಗೆಯಿಂದ ವಿನಾಯಿತಿ ಹೊಂದಿರುವ ವ್ಯಕ್ತಿಗಳಿಗೆ ಕೂಡ ವಿವರಪಟ್ಟಿಕೆ ಸಲ್ಲಿಸುವ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ಅಧಿನಿಯಮದಲ್ಲಿ ಅಗತ್ಯ ತಿದ್ದುಪಡಿಗಳನ್ನು ಕೈಗೊಳ್ಳಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಗ್ರೂಪ್-ಎ ವೃಂದದ ಅಧಿಕಾರಿಗಳಿಗೆ ದೇಶದಲ್ಲೇ ಮೊದಲ ಬಾರಿಗೆ ರಚನಾತ್ಮಕ, ವಸ್ತುನಿಷ್ಠ, ಪಾರದರ್ಶಕವಾದ ಕಾರ್ಯಕ್ಷಮತೆ ಆಧಾರದ ಮೇಲೆ ಮೌಲ್ಯಮಾಪನ ವ್ಯವಸ್ಥೆಯನ್ನು ನಿರ್ದಿಷ್ಠ ಮಾನದಂಡಗಳ ಆಧಾರಗಳ ಮೇಲೆ ಕೈಗೊಳ್ಳಲಾಗುವುದು. ಈ ನೀತಿಯನ್ನು ಅನುಸರಿಸಿ ಇಲಾಖೆಯ ಜಂಟಿ ಆಯುಕ್ತರವರೆಗಿನ ಅಧಿಕಾರಿಗಳ ವರ್ಗಾವಣೆಯನ್ನು ಕೌನ್ಸಲಿಂಗ್‌ ಮೂಲಕ ವರ್ಗಾವಣೆ ಮಾಡಲು ಉದ್ದೇಶಿಸಿದೆ.

2026-27ನೇ ಸಾಲಿಗೆ ವಾಣಿಜ್ಯ ತೆರಿಗೆ ಇಲಾಖೆಯ ರಾಜಸ್ವ ಸಂಗ್ರಹಣೆಯ ಗುರಿಯನ್ನು 1,25,000 ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular