HomeLatest NewsBIG NEWS: ಕಾಲ್ತುಳಿತ ದುರಂತ: ಘಟನೆ ಬಗ್ಗೆ ಗೊತ್ತಾಗಿದ್ದರೆ ಕಾರ್ಯಕ್ರಮದ ವೇದಿಕೆಯನ್ನೇ ಹತ್ತುತ್ತಿರಲಿಲ್ಲ: ಬೇಸರ ವ್ಯಕ್ತಪಡಿಸಿದ...

BIG NEWS: ಕಾಲ್ತುಳಿತ ದುರಂತ: ಘಟನೆ ಬಗ್ಗೆ ಗೊತ್ತಾಗಿದ್ದರೆ ಕಾರ್ಯಕ್ರಮದ ವೇದಿಕೆಯನ್ನೇ ಹತ್ತುತ್ತಿರಲಿಲ್ಲ: ಬೇಸರ ವ್ಯಕ್ತಪಡಿಸಿದ ಸಿಎಂ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ಸ್ವಲ್ಪ ಮಾಹಿತಿ ಇದ್ದರೂ ವಿಧಾನಸೌಧದಲ್ಲಿ ಕಾರ್ಯಕ್ರಮ ಮಾಡುತ್ತಲೇ ಇರಲಿಲ್ಲ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಆಪ್ತರ ಬಳಿ ತೀವ್ರ ಬೇಸರ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ, ಕಾಲ್ತುಳಿತ ಘಟನೆ ಬಗ್ಗೆ ಅಧಿಕಾರಿಗಳು ತಡವಾಗಿ ಹೇಳಿದರು. ಸಾವಿನ ವಿಚಾರ ಗೊತ್ತಿದ್ದರೆ ವಿಧನಾಸೌಧದಲ್ಲಿ ಅಭಿನಂದನಾ ಸಮಾರಂಭ ಮಾಡುತ್ತಿರಲಿಲ್ಲ. ಕಾರ್ಯಕ್ರಮದ ಸ್ಟೇಜ್ ಕೂಡ ನಾನು ಹತ್ತುತ್ತಿರಲಿಲ್ಲ. ದುರಂತ ನಡೆದು ಹೋಗಿದೆ ಎಂದು ಭಾವುಕರಾಗಿದ್ದಾರೆ ಎಂದು ತಿಳಿದುಬಂದಿದೆ.

ಆರ್ ಸಿಬಿ ಸಂಭ್ರಮಾಚರಣೆ ವೇಳೆ ಜೂನ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತ ಸಂಭವಿಸಿ 11 ಜನರು ಸಾವನ್ನಪ್ಪಿದ್ದರು. ಹಲವರು ಗಾಯಗೊಂಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular