HomeKarnatakaBIG NEWS: ನಮಗೆ ಆತ್ಮಸಾಕ್ಷಿ ಮತ ಬೀಳಲಿದೆ ಎಂದ HDKಗೆ ಟಾಂಗ್ ನೀಡಿದ ಸಿಎಂ ಸಿದ್ದರಾಮಯ್ಯ

BIG NEWS: ನಮಗೆ ಆತ್ಮಸಾಕ್ಷಿ ಮತ ಬೀಳಲಿದೆ ಎಂದ HDKಗೆ ಟಾಂಗ್ ನೀಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗೆ ಆತ್ಮಸಾಕ್ಷಿ ಮತಗಳು ಬೀಳಲಿವೆ ಎಂಬ ಮಾಜಿ ಸಿಎಂ ಹೆಚ್,ಡಿ.ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಮೂವರು ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆತ್ಮಸಾಕ್ಷಿ ಮತ ಎಂದು ಹೇಳಿರುವ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಆತ್ಮಸಾಕ್ಷಿ ಅಂದ್ರೆ ಏನು? ಅವರ ಮತಗಳೇ ನಮ್ಮ ಪಕ್ಷದ ಅಭ್ಯರ್ಥಿಗೆ ಬರಲಿದೆ. ಕುಮಾರಸ್ವಾಮಿಯವರಿಗೆ ಆತ್ಮಸಾಕ್ಷಿ ಇದೆಯೇ? ಅವರಿಗೆ ಆತ್ಮವೇ ಇಲ್ಲ, ಜಾತ್ಯಾತೀತ ಎಂದು ಹೇಳಿಕೊಂಡು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಅವರೊಂದಿಗೆ ಒಡಾಡುತ್ತಿದ್ದಾರೆ ಇನ್ನು ಆತ್ಮಸಾಕ್ಷಿ ಎಲ್ಲಿಂದ ಬಂತು? ಎಂದು ವ್ಯಂಗ್ಯವಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಮ್ಮ ಪಕ್ಷದವರಿಗೆ ಬೆದರಿಕೆ ಹಾಕಿ, ಆಮಿಷವೊಡ್ಡಿದ್ದಾರೆ. ಬೆದರಿಕೆ ಹಾಕಿದ್ದಕ್ಕೆ ಎಫ್ ಐ ಆರ್ ದಾಖಲಾಗಿದೆ ಎಂದು ಹೇಳಿದರು.

 

For Latest News Updates, Join Our Whatsapp Community🚩
RELATED ARTICLES

Most Popular