HomeKarnatakaBIG NEWS: ಅಪ್ಪ-ಮಗ-ಮೊಮ್ಮಗ ಎಲ್ಲರೂ ಗೊಳೋ ಅಂತಾ ಅಳೋದು: ಜೆಡಿಎಸ್ ನಾಯಕರ ಕಣ್ಣೀರಿಗೆ ಸಿಎಂ ವ್ಯಂಗ್ಯ

BIG NEWS: ಅಪ್ಪ-ಮಗ-ಮೊಮ್ಮಗ ಎಲ್ಲರೂ ಗೊಳೋ ಅಂತಾ ಅಳೋದು: ಜೆಡಿಎಸ್ ನಾಯಕರ ಕಣ್ಣೀರಿಗೆ ಸಿಎಂ ವ್ಯಂಗ್ಯ

ಬೆಂಗಳೂರು: ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಕೈ ಹಿಡಿದಿವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ನಾಯಕರ ಮಾಡಿದ್ದ ಸುಳ್ಳು ಆರೋಪಗಳ ಬಗ್ಗೆ ಕಿಡಿ ಕಾರಿದರು. ಇದೇ ವೇಳೆ ಹೆಚ್.ಡಿ.ದೇವೇಗೌಡರ ಕುಟುಂಬದ ಕಣ್ಣೀರಿಗೆ ವ್ಯಂಗ್ಯವಾಡಿದರು.

ಸಿಎಂ ಸಿದ್ದರಾಮಯ್ಯ ಅವರ ಗರ್ವಭಂಗ ಮಾಡಬೇಕು, ಸೊಕ್ಕು ಮುರಿಯಬೇಕು ಎಂದು ದೇವೇಗೌಡ ಅಬ್ಬರಿಸಿದ್ದರು. ನಾನು ಯಾವತ್ತೂ ಗರ್ವದಿಂದ ವರ್ತಿಸಿಲ್ಲ. ನನಗೆ ಅಧಿಕಾರ ಇರಲಿ, ಇಲ್ಲದಿರಲಿ ನಾನು ಹೀಗೆಯೇ ಇರುತ್ತೇನೆ ಎಂದು ಹೇಳಿದರು. ದೊಡ್ಡಗೌಡರ ಫ್ಯಾಮಿಲಿ ಅಳುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದೆ. ಗೊಳೋ ಅಂತ ಅಳೋದು ಎಂದು ವ್ಯಂಗ್ಯವಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್.ಡಿ.ದೇವೇಗೌಡರು, ಕುಮಾರಸ್ವಾಮಿ, ನಿಖಿಲ್ ಹೀಗೆ ಅಪ್ಪ-ಮಗ-ಮೊಮ್ಮಗ ಎಲ್ಲರೂ ಗೊಳೋ ಅಂತ ಅಳೋದು. ಹೃದಯವಿದ್ದವರಿಗೆ ಕಣ್ಣೀರು ಬರುತ್ತೆ ಅಂತ ಬೇರೆ ಹೇಳೋದು. ಹಾಸನದಲ್ಲಿ ಅಂದು ಹೆಣ್ಣು ಮಕ್ಕಳೆಲ್ಲ ಕಣ್ಣೀರು ಹಾಕಿದ್ರಲ್ಲ ಆಗ ಇವರಿಗೆ ಹೃದಯವಿರಲಿಲ್ಲವೇ? ಅಂದು ನಿಮ್ಮ ಹೃದಯ ಕರಗಲೂ ಇಲ್ಲವಾ? ಎಂದು ವಾಗ್ದಾಳಿ ನಡೆಸಿದರು.

For Latest News Updates, Join Our Whatsapp Community🚩
RELATED ARTICLES

Most Popular