HomeKarnatakaಸಿದ್ದು ರಾಜೀನಾಮೆ ಫಿಕ್ಸ್ ಆದ ಬೆನ್ನಲ್ಲೇ ಶುರುವಾಯ್ತು ಹೊಸ ಲೆಕ್ಕಾಚಾರ ಸಿಎಂ ಸ್ಥಾನ ಬದಲಾದರೆ ಕಾಂಗ್ರೆಸ್‌ಗೆ...

ಸಿದ್ದು ರಾಜೀನಾಮೆ ಫಿಕ್ಸ್ ಆದ ಬೆನ್ನಲ್ಲೇ ಶುರುವಾಯ್ತು ಹೊಸ ಲೆಕ್ಕಾಚಾರ ಸಿಎಂ ಸ್ಥಾನ ಬದಲಾದರೆ ಕಾಂಗ್ರೆಸ್‌ಗೆ ಎದುರಾಗಲಿವೆ ಈ 4 ಬಿಗ್ ಚಾಲೆಂಜ್

ಬೆಂಗಳೂರು: ಕರ್ನಾಟಕ ರಾಜಕೀಯ ವಲಯದಲ್ಲಿ ಭಾರಿ ದೊಡ್ಡ ರಾಜಕೀಯ ಹೈಡ್ರಾಮಾಗೆ ವೇದಿಕೆ ಸಿದ್ಧವಾಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಗುರುವಾರವೇ ಅವರು ರಾಜೀನಾಮೆ ಪತ್ರ ಸಲ್ಲಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಈ ಮಹತ್ವದ ಬೆಳವಣಿಗೆಯಿಂದಾಗಿ ಕೈ ಪಾಳಯದಲ್ಲಿ ತಲ್ಲಣ ಸೃಷ್ಟಿಯಾಗಿದೆ.

ಮಂಗಳವಾರವಷ್ಟೇ ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆಗಿರುವ ಸಿಎಂ, ಬುಧವಾರ ಕೆಪಿಸಿಸಿ ಕಚೇರಿ ಹಾಗೂ ವಿಧಾನಸೌಧದ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇದೇ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ರಾಜ್ಯಕ್ಕೆ ಆಗಮಿಸುತ್ತಿದ್ದು, ಇವರ ಎಂಟ್ರಿ ಬೆನ್ನಲ್ಲೇ ರಾಜೀನಾಮೆ ಪ್ರಕ್ರಿಯೆಗೆ ಅಧಿಕೃತ ಚಾಲನೆ ಸಿಗಲಿದೆ. ಆದರೆ, ಸಿದ್ದರಾಮಯ್ಯ ಸಿಎಂ ಗದ್ದುಗೆಯಿಂದ ಕೆಳಗಿಳಿದರೆ ಕಾಂಗ್ರೆಸ್ ಪಕ್ಷಕ್ಕೆ ಏನೆಲ್ಲಾ ಪರಿಣಾಮ ಎದುರಾಗಬಹುದು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

1.ಅಹಿಂದ (AHINDA) ಒಳ ಏಟಿನ ಭೀತಿ

ಸಿದ್ದರಾಮಯ್ಯ ಅವರು ಕೇವಲ ಒಬ್ಬ ನಾಯಕರಲ್ಲ, ಅವರು ರಾಜ್ಯದ ಪ್ರಭಾವಿ ಅಹಿಂದ ವರ್ಗದ ಪ್ರಶ್ನಾತೀತ ನಾಯಕ. ಕಾಂಗ್ರೆಸ್‌ಗೆ ಸದಾ ಬೆನ್ನೆಲುಬಾಗಿ ನಿಲ್ಲುವ ಈ ಅಹಿಂದ ವರ್ಗವನ್ನು ಸದ್ಯದ ಪರಿಸ್ಥಿತಿಯಲ್ಲಿ ಕೆಣಕಿದರೆ, ಭವಿಷ್ಯದಲ್ಲಿ ಪಕ್ಷಕ್ಕೆ ದೊಡ್ಡ ಮಟ್ಟದ ಹಾನಿಯಾಗುವ ಆತಂಕ ಹೈಕಮಾಂಡ್‌ಗೆ ಇದೆ. ಒಂದು ವೇಳೆ ಹೈಕಮಾಂಡ್ ಒತ್ತಡದಿಂದಲೇ ಸಿದ್ದರಾಮಯ್ಯ ಪೀಠ ತ್ಯಾಗ ಮಾಡಿದರು ಎಂಬ ಸಂದೇಶ ಜನರಿಗೆ ತಲುಪಿದರೆ, ಅದು ಪಕ್ಷಕ್ಕೆ ಒಳ ಹೊಡೆತ ನೀಡಲಿದೆ. ಹೀಗಾಗಿ ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುವುದು ಹೈಕಮಾಂಡ್ ಮುಂದಿರುವ ಮೊದಲ ಸವಾಲು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2.ಹೊಸ ನಾಯಕನ ಆಯ್ಕೆ: ಸಿಎಂ ರೇಸ್‌ನಲ್ಲಿ ಡಿಕೆಶಿ ಮುಂದಿದ್ದರೂ ತಪ್ಪದ ಗೊಂದಲ

ಸಿದ್ದರಾಮಯ್ಯ ರಾಜೀನಾಮೆ ನೀಡಿದ್ರೆ ಸಿಎಂ ಸ್ಥಾನ ಡೆಪ್ಯುಟಿ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಸಿಗುವುದು ಬಹುತೇಕ ಖಚಿತ. ಯಾಕಂದ್ರೆ ಈ ಇಡೀ ರಾಜೀನಾಮೆ ಸನ್ನಿವೇಶ ಸೃಷ್ಟಿಯಾಗಿರುವುದೇ ಡಿಕೆಶಿ ಒತ್ತಡದಿಂದ ಎಂಬುದು ಓಪನ್ ಸೀಕ್ರೆಟ್. ಆದರೆ, ಶಿವಕುಮಾರ್ ಅವರಿಗೆ ಸಿಎಂ ಪಟ್ಟ ಕಟ್ಟುವ ವಿಚಾರದಲ್ಲಿ ಪಕ್ಷದ ಆಂತರಿಕ ವಲಯದಲ್ಲಿ ತೀವ್ರ ಭಿನ್ನಾಭಿಪ್ರಾಯವಿದೆ.

ಇದೇ ಕಾರಣಕ್ಕೆ ಸಿದ್ದರಾಮಯ್ಯ ಆಪ್ತರು ದಲಿತ ಸಿಎಂ ಕಾರ್ಡ್ ಅನ್ನು ಮುನ್ನೆಲೆಗೆ ತರುತ್ತಿದ್ದಾರೆ. ಸಿದ್ದರಾಮಯ್ಯ ಜೊತೆ ಡಾ. ಜಿ. ಪರಮೇಶ್ವರ್ ದೆಹಲಿಗೆ ತೆರಳಿ ಬಂದಿರುವುದು ಇದೇ ಲೆಕ್ಕಾಚಾರಕ್ಕೆ ಎನ್ನಲಾಗಿದೆ. ಈ ಬಿಕ್ಕಟ್ಟು ಶಮನ ಮಾಡಲು ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಿ, ಅವರ ಜೊತೆಗೆ 4 ಡಿಸಿಎಂ (DCM) ಹುದ್ದೆಗಳನ್ನು ಸೃಷ್ಟಿಸುವ ಪ್ಲಾನ್ ಕೂಡ ಹೈಕಮಾಂಡ್ ಮುಂದಿದೆ.

3.ಸಿದ್ದರಾಮಯ್ಯಗೆ ಮುಂದಿನ ಸ್ಥಾನಮಾನ ಏನು? ಸೂಪರ್ ಸಿಎಂ ಆಗ್ತಾರಾ ‘ಸಿದ್ದು’?

ರಾಜೀನಾಮೆ ನಂತರ ಸಿದ್ದರಾಮಯ್ಯ ಅವರನ್ನು ರಾಜ್ಯಸಭೆ ಸದಸ್ಯ ಸ್ಥಾನದ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಕರೆದೊಯ್ಯುವ ಲೆಕ್ಕಾಚಾರ ದೆಹಲಿ ಮಟ್ಟದಲ್ಲಿದೆ. ಆದರೆ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಆಫರ್ ಒಪ್ಪಿ ದಿಲ್ಲಿಗೆ ಹೋಗುವುದು ಇಷ್ಟವಿಲ್ಲ ಎನ್ನಲಾಗುತ್ತಿದೆ. ಒಂದು ವೇಳೆ ಅವರು ರಾಜ್ಯ ರಾಜಕಾರಣದಲ್ಲೇ ಉಳಿದರೆ, ಸಚಿವರು ಮತ್ತು ಶಾಸಕರ ದೊಡ್ಡ ದಂಡೇ ಅವರ ಹಿಂದಿರುವುದರಿಂದ ದೆಹಲಿ ನಾಯಕರಿಗೆ ತಲೆನೋವು ಗ್ಯಾರಂಟಿ. ಅಧಿಕಾರದಿಂದ ದೂರವಿದ್ದರೂ ಸಿದ್ದರಾಮಯ್ಯ ಮತ್ತೊಂದು ‘ಪವರ್ ಸೆಂಟರ್’ ಆಗಿ ಹೊರಹೊಮ್ಮಲಿದ್ದಾರೆ.

4.2028ರ ವಿಧಾನಸಭಾ ಚುನಾವಣೆಗೆ ಬಿಗ್ ಸವಾಲು

ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಮಾಡುವುದು ಜೇನುಗೂಡಿಗೆ ಕೈಹಾಕಿದಂತೆ. ಇನ್ನುಳಿದ 2 ವರ್ಷಗಳ ಆಡಳಿತಾವಧಿ ಕಾಂಗ್ರೆಸ್ ಪಾಲಿಗೆ ಅತ್ಯಂತ ಕಠಿಣವಾಗಿರಲಿದೆ. 2028ರ ಸಾರ್ವತ್ರಿಕ ಚುನಾವಣೆ ಹತ್ತಿರವಿರುವುದರಿಂದ ಸಿದ್ದರಾಮಯ್ಯ ಅವರನ್ನು ವಿಶ್ವಾಸಕ್ಕೆ ಪಡೆಯದೇ ಹೈಕಮಾಂಡ್ ಒಂದು ಹೆಜ್ಜೆಯೂ ಮುಂದೆ ಇಡಲು ಸಾಧ್ಯವಿಲ್ಲ.

ಹಿಂದೆ ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ದಿಢೀರ್ ಆಗಿ ಸಿಎಂ ಸ್ಥಾನದಿಂದ ಕೆಳಗಿಳಿಸಿದ ಪರಿಣಾಮವನ್ನು ಬಿಜೆಪಿ 2023ರ ಚುನಾವಣೆಯಲ್ಲಿ ಅನುಭವಿಸಿತ್ತು. ಈಗ ಕಾಂಗ್ರೆಸ್‌ನಲ್ಲೂ ಸಿದ್ದರಾಮಯ್ಯ ವಿರುದ್ಧ ಯಾವುದೇ ಗಂಭೀರ ಆರೋಪಗಳಿಲ್ಲ, ಅವರ ಆರೋಗ್ಯವೂ ಸೂಪರ್ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜೀನಾಮೆ ಕೊಡಿಸುತ್ತಿರುವುದು ಮುಂದಿನ ದಿನಗಳಲ್ಲಿ ತೀವ್ರ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗುವುದನ್ನು ಅಲ್ಲಗಳೆಯುವಂತಿಲ್ಲ.

ಒಟ್ಟಿನಲ್ಲಿ, ಈ ಎಲ್ಲಾ ಹೈ-ವೋಲ್ಟೇಜ್ ಪರಿಣಾಮಗಳನ್ನು ಹೈಕಮಾಂಡ್ ಹೇಗೆ ನಿಭಾಯಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular