HomeLive Newsರಾಜೀನಾಮೆ ವಿಚಾರ ಕೇಳಿ ಕಣ್ಣೀರು ಹಾಕಿದ ಸಿಎಂ ಸಚಿವಾಲಯದ ಸಿಬ್ಬಂದಿ: ಸಮಾಧಾನ ಪಡಿಸಿದ ಸಿದ್ದರಾಮಯ್ಯ

ರಾಜೀನಾಮೆ ವಿಚಾರ ಕೇಳಿ ಕಣ್ಣೀರು ಹಾಕಿದ ಸಿಎಂ ಸಚಿವಾಲಯದ ಸಿಬ್ಬಂದಿ: ಸಮಾಧಾನ ಪಡಿಸಿದ ಸಿದ್ದರಾಮಯ್ಯ

ಬೆಂಗಳೂರು: ಹೈಕಾಂಡ್ ಸೂಚನೆ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು, ನಾಳೆ ಬೆಳಿಗ್ಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಸಿದ್ದರಾಮಯ್ಯ ರಾಜೀನಾಮೆ ವಿಷಯ ಕೇಳುತ್ತಿದ್ದಂತೆ ಸಿಎಂ ಸಚಿವಾಲಯದ ಸಿಬ್ಬಂದಿಗಳು, ಉದ್ಯೋಗಿಗಳು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ರಾಜೀನಾಮೆ ಕೊಡದಂತೆ ಮನವಿ ಮಾಡಿದ್ದಾರೆ. ಕಣ್ಣೀರಿಟ್ಟ ಸಿಬ್ಬಂದಿಗಳನ್ನು ಕಂಡು ಸಿಎಂ ಸಿದ್ದರಾಮಯ್ಯ ಸಮಾಧಾನ ಪಡಿಸಿದ್ದಾರೆ.

ಸಿಎಂ ಸಚಿವಾಲಯದ ಎಲ್ಲಾ ಉದ್ಯೋಗಿಗಳು ಸಿದ್ದರಾಮಯ್ಯನವರಿಗೆ ರಾಜೀನಾಮೆ ನೀಡದಂತೆ ಒತ್ತಾಯಿಸಿದ ಪ್ರಸಂಗವೂ ನಡೆಯಿತು. ಎಲ್ಲಾ ಸಿಬ್ಬಂದಿಗಳಿಗೆ, ಉದ್ಯೋಗಿಗಳಿಗೆ ಸಿದ್ದರಾಮಯ್ಯ ಸಮಾಧಾನದ ಮಾತುಗಳನ್ನು ಆಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಧಿಕಾರ ಹಂಚಿಕೆ ಸೂತ್ರದಂತೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಂಗಳವಾರ ದೆಹಲಿಯಲ್ಲಿ ನಡೆದ ಹೈಕಮಾಂಡ್ ನಾಯಕರ ಸಭೆಯಲ್ಲಿ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆ. ರಾಹುಲ್ ಗಾಂಧಿ ಮಾತಿಗೆ ಒಪ್ಪಿದ ಸಿದ್ದರಾಮಯ್ಯ ಪದ ತ್ಯಾಗಕ್ಕೆ ಒಪ್ಪಿದ್ದಾರೆ. ಅಲ್ಲದೇ ಸಿದ್ದರಮಯ್ಯನವರಿಗೆ ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಹೈಕಮಾಂಡ್ ಆಹ್ವಾನಿಸಿದೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular