HomeHealthಋತುಚಕ್ರದ ನೋವು ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ ಶುಂಠಿ ಉತ್ತಮ ಮನೆಮದ್ದು: ಇಲ್ಲಿದೆ ಬಳಸುವ ಸರಿಯಾದ ಕ್ರಮ

ಋತುಚಕ್ರದ ನೋವು ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ ಶುಂಠಿ ಉತ್ತಮ ಮನೆಮದ್ದು: ಇಲ್ಲಿದೆ ಬಳಸುವ ಸರಿಯಾದ ಕ್ರಮ

ಶುಂಠಿ ಕೇವಲ ಅಡುಗೆಯ ರುಚಿ ಹೆಚ್ಚಿಸುವ ಸಾಂಬಾರು ವಸ್ತುವಷ್ಟೇ ಅಲ್ಲ. ಪ್ರಾಚೀನ ಕಾಲದಿಂದಲೂ ಮನೆಮದ್ದುಗಳಲ್ಲಿ ಪ್ರಮುಖವಾಗಿ ಬಳಕೆಯಾಗುತ್ತಿರುವ ಶುಂಠಿಯಲ್ಲಿ ಹಲವು ಆರೋಗ್ಯಕರ ಸಕ್ರಿಯ ಘಟಕಗಳಿವೆ. ಇದು ಹೊಟ್ಟೆ ಉಬ್ಬರ, ಕೀಲು ನೋವು ಮತ್ತು ವಾಕರಿಕೆಯಂತಹ ಸಮಸ್ಯೆಗಳಿಗೆ ಉತ್ತಮ ಪರಿಹಾರ ನೀಡುತ್ತದೆ. ದಿನನಿತ್ಯದ ಆಹಾರದಲ್ಲಿ ಶುಂಠಿಯನ್ನು ಬಳಸುವುದು ಆರೋಗ್ಯಕ್ಕೆ ಒಳ್ಳೆಯದಾದರೂ, ಅದನ್ನು ಮಿತವಾಗಿಿಸುವುದು ಅತ್ಯಗತ್ಯ.

ಜೀರ್ಣಕ್ರಿಯೆ ಹೆಚ್ಚಿಸಲು ಸಹಕಾರಿ

ಊಟಕ್ಕೆ ಮೊದಲು ಸಣ್ಣ ತುಂಡು ಹಸಿ ಶುಂಠಿಯನ್ನು ಸೇವಿಸುವುದರಿಂದ ಜೀರ್ಣಕಾರಿ ಕಿಣ್ವಗಳು ಉತ್ತೇಜಿತಗೊಂಡು ಆಹಾರ ಬೇಗನೆ ಜೀರ್ಣವಾಗುತ್ತದೆ. ಗ್ಯಾಸ್, ಹೊಟ್ಟೆ ಉಬ್ಬರ ಹಾಗೂ ವಾಕರಿಕೆಯಂತಹ ಸಮಸ್ಯೆಗಳನ್ನು ಇದು ಪರಿಣಾಮಕಾರಿಯಾಗಿ ತಡೆಯುತ್ತದೆ. ಆದರೆ ತೀವ್ರತರದ ಹೊಟ್ಟೆನೋವು ಅಥವಾ ಅಸಿಡಿಟಿ ಇದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಋತುಚಕ್ರದ ನೋವಿಗೆ ಸ್ವಾಭಾವಿಕ ಮುಕ್ತಿ

ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಕಂಡುಬರುವ ಹೊಟ್ಟೆನೋವು ಮತ್ತು ಸೆಳೆತಕ್ಕೆ ಶುಂಠಿ ಅತ್ಯುತ್ತಮ ನೈಸರ್ಗಿಕ ಔಷಧಿಯಾಗಿ ಕೆಲಸ ಮಾಡುತ್ತದೆ. ಋತುಚಕ್ರದ ಆರಂಭದ ದಿನಗಳಲ್ಲಿ ಬಿಸಿ ಶುಂಠಿ ಟೀ ಕುಡಿಯುವುದರಿಂದ ದೈಹಿಕ ಆಯಾಸ ಮತ್ತು ನೋವಿನ ತೀವ್ರತೆ ಕಡಿಮೆಯಾಗುತ್ತದೆ.

ಕೀಲು ನೋವು ಮತ್ತು ಹೃದಯದ ಆರೋಗ್ಯ

ಶುಂಠಿಯಲ್ಲಿರುವ ಉರಿಯೂತ ಶಮನಕಾರಿ ಗುಣಗಳು ಕೀಲು ನೋವು ಹಾಗೂ ದೇಹದ ಬಿಗಿತವನ್ನು ಕಡಿಮೆ ಮಾಡುತ್ತವೆ. ಚಳಿಗಾಲದಲ್ಲಿ ಬಿಸಿ ಶುಂಠಿ ಚಹಾ ಕುಡಿಯುವುದರಿಂದ ದೇಹಕ್ಕೆ ಬೆಚ್ಚಗಿನ ಅನುಭವ ಸಿಗುತ್ತದೆ. ಜೊತೆಗೆ ಇದು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ.

ತೂಕ ಇಳಿಕೆಗೆ ಪೂರಕ

ಬೆಳಿಗ್ಗೆ ಬಿಸಿ ಶುಂಠಿ ನೀರನ್ನು ಕುಡಿಯುವುದರಿಂದ ಚಯಾಪಚಯ ಕ್ರಿಯೆ ಚುರುಕುಗೊಂಡು ಅತಿಯಾಗಿ ಆಹಾರ ಸೇವಿಸುವುದು ತಪ್ಪುತ್ತದೆ. ಇದು ತೂಕ ಇಳಿಕೆಯ ಪಯಣದಲ್ಲಿ ಉತ್ತಮ ಬೆಂಬಲ ನೀಡುತ್ತದೆ. ನಿಯಮಿತ ವ್ಯಾಯಾಮ ಮತ್ತು ಸಮತೋಲಿತ ಆಹಾರದೊಂದಿಗೆ ಇದನ್ನು ಬಳಸಿದಾಗ ಉತ್ತಮ ಫಲಿತಾಂಶ ಸಿಗುತ್ತದೆ.

ಅತಿಯಾದರೆ ಅಪಾಯ ಕಾಯಂ

ಶುಂಠಿ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ, ಅತಿಯಾಗಿ ಸೇವಿಸಿದರೆ ಅಷ್ಟೇ ತೊಂದರೆ ಉಂಟುಮಾಡಬಹುದು. ಅತಿಯಾದ ಶುಂಠಿ ಸೇವನೆಯಿಂದ ಎದೆ ಉರಿ, ಅತಿಸಾರ ಹಾಗೂ ಹೊಟ್ಟೆಯ ಕಿರಿಕಿರಿ ಉಂಟಾಗಬಹುದು. ಶುಂಠಿಯು ರಕ್ತವನ್ನು ತೆಳುವಾಗಿಸುವ ಗುಣ ಹೊಂದಿರುವುದರಿಂದ ಮೂಲವ್ಯಾಧಿ (ಫೈಲ್ಸ್) ಅಥವಾ ರಕ್ತಸ್ರಾವದ ಸಮಸ್ಯೆ ಇರುವವರು ಮತ್ತು ನಿರ್ದಿಷ್ಟ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿರುವವರು ವೈದ್ಯರ ಸಲಹೆ ಪಡೆದೇ ಇದನ್ನು ಬಳಸಬೇಕು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular