HomeIPL 2026ಸೆಲ್ಫಿ ಕೇಳಿದ ಅಭಿಮಾನಿಗೆ ಶ್ರೇಯಸ್ ಐಯ್ಯರ್ ಕೊಟ್ಟ ಉತ್ತರ ಕಂಡು ಇಷ್ಟು ಕೊಬ್ಬು ಒಳ್ಳೆಯದಲ್ಲ ಎಂದ...

ಸೆಲ್ಫಿ ಕೇಳಿದ ಅಭಿಮಾನಿಗೆ ಶ್ರೇಯಸ್ ಐಯ್ಯರ್ ಕೊಟ್ಟ ಉತ್ತರ ಕಂಡು ಇಷ್ಟು ಕೊಬ್ಬು ಒಳ್ಳೆಯದಲ್ಲ ಎಂದ ನೆಟ್ಟಿಗರು; ವಿಡಿಯೊ

ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಅರ್ಧಭಾಗ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ.

ಇಲ್ಲಿಯವರೆಗೆ ನಡೆದಿರುವ ಪಂದ್ಯಗಳಲ್ಲಿ ಎಲ್ಲ ತಂಡಗಳೂ ಸೋಲಿನ ರುಚಿಯನ್ನು ಅನುಭವಿಸಿದ್ದರೂ ಪಂಜಾಬ್ ಕಿಂಗ್ಸ್ ತಂಡ ಮಾತ್ರ ಯಾವುದೇ ಪಂದ್ಯದಲ್ಲಿ ಸೋಲದೇ ಸೋಲಿಲ್ಲದ ಸರದಾರನಾಗಿ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ.

ಸದ್ಯ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 6 ಪಂದ್ಯಗಳನ್ನಾಡಿ ಐದರಲ್ಲಿ ಗೆದ್ದು ಉಳಿದೊಂದು ಪಂದ್ಯ ಫಲಿತಾಂಶವಿಲ್ಲದ ಕಾರಣ 11 ಅಂಕಗಳನ್ನು ಹೊಂದಿರುವ ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಪ್ಲೇಆಫ್ ಪ್ರವೇಶದ ಹಾದಿಯನ್ನು ಸುಲಭ ಮಾಡಿಕೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ತಂಡ ಬೃಹತ್ ಯಶಸ್ಸು ಸಾಧಿಸಲು ಕಾರಣ ಶ್ರೇಯಸ್ ಐಯ್ಯರ್ ಅದ್ಭುತ ನಾಯಕತ್ವ ಎಂಬುದನ್ನು ಒಪ್ಪಲೇಬೇಕು. ಕಳೆದ ವರ್ಷವೂ ಇದೇ ರೀತಿ ತಂಡವನ್ನು ಮುನ್ನಡೆಸಿ ಫೈನಲ್‌ ಹಂತದವರೆಗೂ ತಂದಿದ್ದ ಐಯ್ಯರ್ ಈ ಬಾರಿಯೂ ಸಹ ನೈಪುಣ್ಯತೆಯಿಂದ ನಾಯಕತ್ವ ನಿಭಾಯಿಸುತ್ತಿದ್ದಾರೆ.

ಇಷ್ಟು ಯಶಸ್ಸು ಸಾಧಿಸಿರುವ ಐಯ್ಯರ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆಯ ಪೋಸ್ಟ್‌ಗಳು ಹರಿದಾಡಿದ್ದವು. ಆದರೆ ಇದೀಗ ಮೈದಾನದಿಂದೀಚೆಗೆ ತನ್ನನ್ನು ಇಷ್ಟಪಡುವ ಅಭಿಮಾನಿಗಳ ಜತೆ ಶ್ರೇಯಸ್ ಐಯ್ಯರ್ ಯಾವ ರೀತಿ ನಡೆದುಕೊಳ್ಳುತ್ತಾರೆ ನೋಡಿ ಎಂದು ನೆಟ್ಟಿಗರೊಬ್ಬರು ಹಂಚಿಕೊಂಡಿರುವ ವಿಡಿಯೊ ವೈರಲ್ ಆಗಿದ್ದು, ಇಷ್ಟೊಂದು ಕೊಬ್ಬು ಒಳ್ಳೆಯದಲ್ಲ ಎಂದಿದ್ದಾರೆ.

ಅಭಿಮೊನಿಯೊಬ್ಬ ಸೆಲ್ಫಿ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಐಯ್ಯರ್ ‘ಮೊದಲು ನನ್ನ ಬದಲು ನೀನು ಹೋಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡು’ ಎಂದು ಪದೇ ಪದೇ ಹೇಳಿದ್ದಾರೆ. ಕೇವಲ ಸೆಲ್ಫಿ ಕೇಳಿದ ಅಭಿಮಾನಿಗೆ ಇಷ್ಟು ಕೋಪದಿಂದ ಉತ್ತರಿಸುವ ಬದಲು ಸರಿಯಾದ ರೀತಿಯಲ್ಲಿ ಉತ್ತರಿಸಲಾಗುವದಿಲ್ಲವೇ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular