Be Alert : ‘UPI’ ಬಳಸುವ ಅಂಗಡಿ ಮಾಲೀಕರೇ ಎಚ್ಚರ : ಬೆಂಗಳೂರಿನಲ್ಲಿ ಹೊಸ ರೀತಿಯ ವಂಚನೆ ಜಾಲ ಪತ್ತೆ.!

ಬೆಂಗಳೂರು : ಯುಪಿಐ ಬಳಸುವ ಅಂಗಡಿ ಮಾಲೀಕರೇ ಎಚ್ಚರ…! ಹೊಸ ರೀತಿಯ ವಂಚನೆ ಜಾಲ ಪತ್ತೆಯಾಗಿದ್ದು, ನೀವು ಎಚ್ಚರದಿಂದಿರಬೇಕು. ಇಲ್ಲವಾದಲ್ಲಿ ನಿಮ್ಮ ಖಾತೆಯಿಂದ ಖದೀಮರು ಹಣ ಎಗರಿಸಿ ಎಸ್ಕೇಪ್ ಆಗುತ್ತಾರೆ.

ಹೇಗೆ ನಡೆಯುತ್ತೆ ವಂಚನೆ..?

ಗ್ರಾಹಕರು ಬ್ಯುಸಿ ಇರುವ ಸಮಯದಲ್ಲಿ ಬರುವ ಚಾಲಾಕಿ ಕಳ್ಳರು ಫೋನ್ ಫೇ, ಗೂಗಲ್ ಪೇ ಸರಿ ಉಂಟಾ ಅಂತ ಚೆಕ್ ಮಾಡುತ್ತಾರೆ . ಸರ್ವೀಸ್ ಮಾಡುತ್ತೇವೆ ಅಂತ ಹೇಳಿ ಮಾಲೀಕರ ಮೊಬೈಲ್ ತೆಗೆದುಕೊಂಡು 1 ರೂ ಹಣ ಹಾಕಿ ಸರಿಯಾಗಿದೆ. ಸರ್ವೀಸ್ ಆಗಿದೆ ಎಂದು ಹೇಳುತ್ತಾರೆ. ನಂತರ ಕೆಲವೇ ಕ್ಷಣದಲ್ಲಿ ಹಣವನ್ನು ತಮ್ಮ ಖಾತೆಗೆ ಹಾಕಿಕೊಂಡು ಎಸ್ಕೇಪ್ ಆಗುತ್ತಾರೆ.

ನೆಲಮಂಗದಲ್ಲಿ ಈ ರೀತಿಯ ಘಟನೆ ನಡೆದಿದ್ದು, ಸರ್ವೀಸ್ ಮಾಡುವ ನೆಪದಲ್ಲಿ 75,000 ಹಣ ವರ್ಗಾವಣೆ ಮಾಡಿ ಎಸ್ಕೇಪ್ ಆಗಿದ್ದಾರೆ. ಘಟನೆ ಸಂಬಂಧ ನೆಲಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read