HomeSpecialಇಲ್ಲಿದೆ ಪಾತ್ರೆ ತೊಳೆಯುವ ಸ್ಪಾಂಜ್ ನ ಹಲವು ಉಪಯೋಗಗಳು

ಇಲ್ಲಿದೆ ಪಾತ್ರೆ ತೊಳೆಯುವ ಸ್ಪಾಂಜ್ ನ ಹಲವು ಉಪಯೋಗಗಳು

ಸ್ಪಾಂಜ್ ಗಳನ್ನು ಪಾತ್ರೆಗಳನ್ನು, ಮನೆಯ ಪೀಠೋಪಕರಣ, ಗೋಡೆಗಳನ್ನು ಸ್ವಚ್ಛಗೊಳಿಸಲು ಬಳಸುತ್ತಾರೆ. ಆದರೆ ಈ ಸ್ಪಾಂಜುಗಳನ್ನು ಹಲವು ಕೆಲಸಗಳಿಗೆ ಬಳಸಬಹುದು. ಅದು ಯಾವುದೆಂಬುದನ್ನು ತಿಳಿದುಕೊಳ್ಳೋಣ.

*ಫ್ರಿಜ್ ನಲ್ಲಿ ವಾಸನೆ ಬರುತ್ತಿದ್ದರೆ ಸ್ವಚ್ಛಗೊಳಿಸಲು ಸಮಯವಿಲ್ಲದಿದ್ದಾಗ ಫ್ರಿಜ್ ನ ವಾಸನೆಯನ್ನು ಹೀರಿಕೊಳ್ಳಲು ಸ್ಪಾಂಜ್ ಸಹಾಯ ಮಾಡುತ್ತದೆ. ಅದಕ್ಕಾಗಿ ಸ್ಪಂಜನ್ನು ತಟ್ಟೆಯಲ್ಲಿ ಇರಿಸಿ ಅದರ ಮೇಲೆ ಅಡುಗೆ ಸೋಡಾ ಸಿಂಪಡಿಸಿ ಫ್ರಿಜ್ ನಲ್ಲಿಡಿ. ಇದರಿಂದ ವಾಸನೆ ನಿವಾರಣೆಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಬೇಸಿಗೆಯಲ್ಲಿ ಸಸ್ಯಗಳಿಗೆ ತುಂಬಾ ನೀರು ಬೇಕಾಗುತ್ತದೆ. ಹಾಗಾಗಿ ಅದರ ಬುಡದಲ್ಲಿ ಬಹಳ ಬೇಗ ತೇವಾಂಶ ಕಡಿಮೆಯಾಗುತ್ತದೆ. ಇದರಿಂದ ಸಸ್ಯ ಒಣಗಬಹುದು. ಹಾಗಾಗಿ ಸಸ್ಯದ ಬುಡ ತೇವಾಂಶದಿಂದ ಕೂಡಿರಲು ಸ್ಪಾಂಜ್ ಸಸ್ಯದ ಬುಡದಲ್ಲಿ ಇಡಿ.

*ಬೀಜ ಮೊಳಕೆಯೊಡೆಯಲು ಸ್ಪಾಂಜ್ ಸಹಕಾರಿ. ಹಾಗಾಗಿ ಸ್ಪಾಂಜ್ ಅನ್ನು ನೀರಿನಲ್ಲಿ ನೆನೆಸಿ ಅದರ ಮೇಲೆ ಬೀಜಗಳನ್ನು ಸಿಂಪಡಿಸಿದರೆ ಶೀಘ್ರದಲ್ಲಿಯೇ ಮೊಳಕೆಯೊಡೆಯುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular