ಹಾವೇರಿ: ಶೇಂಗಾ ಒಕ್ಕಲು ಮಾಡುವಾಗ ಯಂತ್ರಕ್ಕೆ ಸಿಲುಕಿ ಮಹಿಳೆ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹೆಸರೂರು ಗ್ರಾಮದಲ್ಲಿ ನಡೆದಿದೆ.
ಕೃಷಿ ಕಾರ್ಮಿಕರಾದ ಶಾರದಾ ಹನುಮಂತಗೌಡ(36) ಮೃತಪಟ್ಟವರು. ಹೆಸರೂರು ಗ್ರಾಮದಲ್ಲಿ ಶೇಂಗಾ ಒಕ್ಕಲು ಮಾಡುವಾಗ ವೇಗವಾಗಿದ್ದ ಯಂತ್ರದಲ್ಲಿ ಶಾರದಾ ಅವರ ಸೀರೆ ಸಿಲುಕಿದೆ. ಕ್ರಮೇಣ ಶಾರದಾ ಅವರು ಕೂಡ ಯಂತ್ರಕ್ಕೆ ಸಿಲುಕಿದ್ದು, ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸವಣೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸವಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

