HomeLatest Newsನೋಡುಗರ ಎದೆ ನಡುಗಿಸುತ್ತೆ ವಿಡಿಯೋ | ಆಟವಾಡುವಾಗಲೇ ಬಡಿದ ಸಿಡಿಲು; ಯುವಕ ಸ್ಥಳದಲ್ಲೇ ಸಾವು

ನೋಡುಗರ ಎದೆ ನಡುಗಿಸುತ್ತೆ ವಿಡಿಯೋ | ಆಟವಾಡುವಾಗಲೇ ಬಡಿದ ಸಿಡಿಲು; ಯುವಕ ಸ್ಥಳದಲ್ಲೇ ಸಾವು

ಪೆರುವಿನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಫುಟ್ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದ ಪರಿಣಾಮ ಆಟಗಾರನೋರ್ವ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಈ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.

ಪೆರುವಿನಲ್ಲಿ ಜುವೆಂಟುಡ್ ಬೆಲ್ಲವಿಸ್ಟಾ ಮತ್ತು ಫ್ಯಾಮಿಲಿಯಾ ಚೋಕಾ ಎಂಬ ಹೆಸರಿನ ಎರಡು ಕ್ಲಬ್‌ಗಳ ನಡುವಿನ ಪಂದ್ಯದ ವೇಳೆ ಈ ದುರಂತ ಘಟನೆ ಸಂಭವಿಸಿದೆ. ಸಿಡಿಲು ಬಡಿದ ಪರಿಣಾಮ ಕೆಲವು ಆಟಗಾರರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಸೋಷಿಯಲ್ ಮೀಡಿಯಾದಲ್ಲಿನ ಪೋಸ್ಟ್ ಪ್ರಕಾರ, ಮಳೆ ಬಂದ ಕಾರಣ ರೆಫರಿ, ಆಟಗಾರರನ್ನು ಮೈದಾನದಿಂದ ಹೊರಗೆ ಹೋಗುವಂತೆ ಸೂಚಿಸಿದ್ದರು. ಆಟಗಾರರು ಮೈದಾನದಿಂದ ಹೊರಗೆ ಹೋಗುತ್ತಿರುವಾಗ, 39 ವರ್ಷದ ಸಾಕರ್ ಆಟಗಾರ ಜೋಸ್ ಹ್ಯೂಗೋ ಡೆ ಲಾ ಕ್ರೂಜ್ ಮೆಸಾಗೆ ಸಿಡಿಲು ಬಡಿದಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಲವು ಆಟಗಾರರಿಗೆ ಸ್ವಲ್ಪ ಸುಟ್ಟಗಾಯಗಳಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಡಿಫೆಂಡರ್ ಜೋಸ್ ಹ್ಯೂಗೋ ಡೆ ಲಾ ಕ್ರೂಜ್ ಮೆಸಾ ಸಾವನ್ನಪ್ಪಿದ್ದರೆ, ಎರಿಕ್ ಎಸ್ಟಿವೆನ್ ಸೆಂಟೆ ಕುಯ್ಲೋರ್, ಜೋಶೆಪ್ ಗುಸ್ಟಾವೊ ಪರಿಯೋನಾ ಚೋಕಾ ಮತ್ತು ಕ್ರಿಸ್ಟಿಯನ್ ಸೀಸರ್ ಪಿಟುಯ್ ಕಹುವಾನಾ ಅವರು ಗಾಯಗೊಂಡಿದ್ದಾರೆ. ಸ್ಥಳೀಯ ಮಾಧ್ಯಮಗಳು ವರದಿ ಮಾಡಿದಂತೆ, ಗೋಲ್‌ಕೀಪರ್ ಜುವಾನ್ ಚೋಕ್ಕಾ ಲಾಕ್ಟಾ ಗಂಭೀರ ಸ್ಥಿತಿಯಲ್ಲಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular