HomeKarnatakaSHOCKING : ಫ್ಯಾಶನ್ ಜೀನ್ಸ್ ಪ್ಯಾಂಟ್'ಗೆ ಹೊಲಿಗೆ ಹಾಕಿದ ಪುಂಡರು : ನೊಂದು ಆತ್ಮಹತ್ಯೆಗೆ ಯತ್ನಿಸಿದ...

SHOCKING : ಫ್ಯಾಶನ್ ಜೀನ್ಸ್ ಪ್ಯಾಂಟ್’ಗೆ ಹೊಲಿಗೆ ಹಾಕಿದ ಪುಂಡರು : ನೊಂದು ಆತ್ಮಹತ್ಯೆಗೆ ಯತ್ನಿಸಿದ ಯುವಕ.!

ಬೆಳ್ತಂಗಡಿ : ಸ್ಟೈಲಿಶ್ ಜೀನ್ಸ್ ಪ್ಯಾಂಟ್ ಧರಿಸಿ ಮಾರುಕಟ್ಟೆಗೆ ಬಂದಿದ್ದ ಯುವಕನನ್ನು ಹಿಡಿದ ಪುಂಡರ ಗುಂಪೊಂದು ಆತನ ಜೀನ್ಸ್ ಪ್ಯಾಂಟ್ ಗೆ ದಬ್ಬಳದಿಂದ ಹೊಲಿಗೆ ಹಾಕಿದ್ದಾರೆ. ಇದರಿಂದ ಮನನೊಂದ ಯುವಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.

ಮಾರುಕಟ್ಟೆಗೆ ಬಂದಿದ್ದ ಪಣಕಜೆ ನಿವಾಸಿ ಮೊಹಮ್ಮದ್ ಆಯುಬ್ ಎಂಬಾತನ ಮೇಲೆ 3-4 ಜನರ ಪುಂಡರ ಗುಂಪು ಈ ಕೃತ್ಯ ಎಸಗಿದೆ. ಯುವಕನ ಎರಡು ಕೈಗಳನ್ನು ಲಾಕ್ ಮಾಡಿಸಿ ಆತನ ಜೀನ್ಸ್ ಪ್ಯಾಂಟನ್ನು ದಬ್ಬಳದಿಂದ ಹೊಲಿದಿದ್ದಾರೆ. ಎಲ್ಲರ ಎದುರೇ ನನ್ನ ಮರ್ಯಾದೆ ಹೋಯ್ತಲ್ಲ ಎಂದು ಮನನೊಂದು ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಸದ್ಯ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಅಪ್ ಡೇಟ್ ಆಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular