HomeIndiaSHOCKING : 'ಮೊಬೈಲ್' ಕಸಿದುಕೊಂಡಿದ ಪತಿಗೆ ಥಳಿಸಿ ಕರೆಂಟ್ ಶಾಕ್ ನೀಡಿದ ಪಾಪಿ ಪತ್ನಿ..!

SHOCKING : ‘ಮೊಬೈಲ್’ ಕಸಿದುಕೊಂಡಿದ ಪತಿಗೆ ಥಳಿಸಿ ಕರೆಂಟ್ ಶಾಕ್ ನೀಡಿದ ಪಾಪಿ ಪತ್ನಿ..!

ಮೊಬೈಲ್ ಕಸಿದುಕೊಂಡಿದ ಪತಿಗೆ ಥಳಿಸಿ ಪತ್ನಿ ಕರೆಂಟ್ ಶಾಕ್ ನೀಡಿದ ಘಟನೆ ಮಣಿಪುರದ ಮೈನ್ಪುರಿಯಲ್ಲಿ ನಡೆದಿದೆ.

ಯಾವಾಗಲೂ ಮೊಬೈಲ್ ಬಳಸುತ್ತಿದ್ದನ್ನು ಗಮನಿಸಿದ ಗಂಡ ಪತ್ನಿಯಿಂದ ಮೊಬೈಲ್ ಕಸಿದಿದ್ದಾನೆ. ತನ್ನ ಮೊಬೈಲ್ ಕಸಿದ ಪತಿಗೆ ಮಹಿಳೆ ವಿದ್ಯುತ್ ಶಾಕ್ ನೀಡಿದ ಆಘಾತಕಾರಿ ಘಟನೆ ನಡೆದಿದೆ.

33 ವರ್ಷದ ಮಹಿಳೆ ಮೊದಲು ಪತಿ ನಿದ್ರೆಗೆ ಜಾರಿದಾಗ ಹಾಸಿಗೆಗೆ ಕಟ್ಟಿಹಾಕಿದ್ದಾಳೆ. ನಂತರ ಕರೆಂಟ್ ಶಾಕ್ ನೀಡಲು ಹೋಗಿದ್ದಾಳೆ. ಅವರ 14 ವರ್ಷದ ಮಗ ತನ್ನ ತಂದೆಯನ್ನು ಉಳಿಸಲು ಪ್ರಯತ್ನಿಸಿದಾಗ, ಅವನನ್ನು ಸಹ ಥಳಿಸಲಾಯಿತು. ಪತಿ ಪ್ರದೀಪ್ ಸಿಂಗ್ ಸೈಫೈ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಂಗ್ 2007 ರಲ್ಲಿ ಔರೈಯಾದ ದಿವಾನ್ ಸಿಂಗ್ ಅವರ ಪುತ್ರಿ ಬೇಬಿ ಯಾದವ್ ಅವರನ್ನು ವಿವಾಹವಾಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘’ ನನ್ನ ಹೆಂಡತಿ ಪ್ರತಿದಿನ ಯಾರ ಜೊತೆನೋ ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿದ್ದಳು. ಇದನ್ನು ಗಮನಿಸಿ ನಾನು ಅವರ ಕುಟುಂಬಕ್ಕೆ ತಿಳಿಸಿದೆ. ನಂತರ ನಾನು ಅವಳ ಮೊಬೈಲ್ ಫೋನ್ ತೆಗೆದುಕೊಂಡೆ. ಇದರಿಂದ ಕೋಪಗೊಂಡ ಮಹಿಳೆ ನನ್ನನ್ನು ಮತ್ತು ನನ್ನ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದಳು.

ಕಳೆದ ವಾರ ನನಗೆ ಕ್ರೂರ ಚಿತ್ರಹಿಂಸೆ ನೀಡಿ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದಳು, ನನ್ನ ತಲೆ ಮತ್ತು ದೇಹದ ಮೇಲೆ ತೀವ್ರ ಗಾಯಗಳಾದವು. ಅವಳು ನನಗೆ ವಿದ್ಯುತ್ ಶಾಕ್ ನೀಡಿದಳು. ನನ್ನ ಮಗ ಮಧ್ಯಪ್ರವೇಶಿಸಿ ನನ್ನನ್ನು ಉಳಿಸಲು ಪ್ರಯತ್ನಿಸಿದಾಗ, ಅವಳು ಅವನ ಮೇಲೂ ಹಲ್ಲೆ ಮಾಡಿದಳು ಎಂದು ಪತಿ ಹೇಳಿದ್ದಾರೆ.ಆರೋಪಿ ಮಹಿಳೆಯ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ), 328 (ಅಪರಾಧ ಮಾಡುವ ಉದ್ದೇಶದಿಂದ ವಿಷದ ಮೂಲಕ ಗಾಯಗೊಳಿಸುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕಿಶ್ನಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಅನಿಲ್ ಕುಮಾರ್ ತಿಳಿಸಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular