HomeKarnatakaಕಳೆದ 15 ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದ ಭವಾನಿ ರೇವಣ್ಣ; ನೋಟಿಸ್ ಗೆ ಉತ್ತರ ನೀಡದೇ...

ಕಳೆದ 15 ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದ ಭವಾನಿ ರೇವಣ್ಣ; ನೋಟಿಸ್ ಗೆ ಉತ್ತರ ನೀಡದೇ ಎಸ್ಕೇಪ್?

ಹಾಸನ: ಅಶ್ಲಿಲ ವಿಡಿಯೋ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಒಂದೆಡೆ ಸಂಸದ ಪ್ರಜ್ವಲ್ ರೇವಣ್ಣ ಬಂಧನವಾಗಿದೆ. ಮತ್ತೊಂದೆಡೆ ಹೆಚ್.ಡಿ.ರೇವಣ್ಣ ಜಾಮೀನು ಅರ್ಜಿ ರದ್ದುಗೊಳಿಸುವಂತೆ ಎಸ್ಐಟಿ ಮತ್ತೆ ಕೋರ್ಟ್ ಮೊರೆ ಹೋಗಿದೆ. ಈ ನಡುವೆ ಹೆಚ್.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣಗೂ ಸಂಕಷ್ಟ ಎದುರಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ನೀಡಿದೆ. ಆದರೆ ಕಳೆದ 15 ದಿನಗಳಿಂದ ಭವಾನಿ ರೇವಣ್ಣ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದೆ.

15 ದಿನಗಳ ಹಿಂದೆ ಎಸ್ಐಟಿ ಅಧಿಕಾರಿಗಳು ಹೊಳೆನರಸೀಪುರ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಆನಂತರ ಮೇ 6ರಂದು ಜೆಡಿಎಸ್ ಶಾಸಕರು, ಮಾಜಿ ಶಾಸಕರು ಹೊಳೆನರಸೀಪುರ ನಿವಾಸದಲ್ಲಿ ಭವಾನಿ ರೇವಣ್ಣ ಅವರನ್ನು ಭೇಟಿಯಾಗಿದ್ದರು. ರೇವಣ್ಣ ಬಿಡುಗಡೆಯಾಗಿ ಜೈಲಿನಿಂದ ಬಂದರೂ ಅವರ ಭೇಟಿಗೂ ಭವಾನಿ ರೇವಣ್ಣ ಬಂದಿಲ್ಲ. ಕಳೆದ 15 ದಿನಗಳಿಂದ ಭವಾನಿ ರೇವಣ್ಣ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಭವಾನಿ ರೇವಣ್ಣ ನಿಗೂಢ ಸ್ಥಳದಲ್ಲಿದ್ದಾರೆ ಎನ್ನಲಾಗುತ್ತಿದೆ.

ಸಧ್ಯ ಎಸ್ಐಟಿ ಭವಾನಿ ರೇವಣ್ಣಗೆ ನೋಟಿಸ್ ನೀಡಿದ್ದು, ಜೂ 1ರಂದು ಮನೆಯಲ್ಲಿಯೇ ಇರುವಂತೆ ಸೂಚಿಸಿದೆ. ಆದರೆ ಎಸ್ಐಟಿ ನೋಟಿಸ್ ಗೆ ಭವಾನಿ ರೇವಣ್ಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನೋಟಿಸ್ ಗೆ ಉತ್ತರ ನೀಡದೇ ಎಸ್ಕೇಪ್ ಆಗಿದ್ದಾರಾ ಎಂಬ ಅನುಮಾನವೂ ವ್ಯಕ್ತವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular