HomeKarnatakaSHOCKING : ರಾಜ್ಯದಲ್ಲಿ ಶಾಕಿಂಗ್ ಘಟನೆ ; ಶಾಲಾ ಶಿಕ್ಷಕನ ಮೊಬೈಲ್ ನಲ್ಲಿ ವಿದ್ಯಾರ್ಥಿನಿಯರ 5000...

SHOCKING : ರಾಜ್ಯದಲ್ಲಿ ಶಾಕಿಂಗ್ ಘಟನೆ ; ಶಾಲಾ ಶಿಕ್ಷಕನ ಮೊಬೈಲ್ ನಲ್ಲಿ ವಿದ್ಯಾರ್ಥಿನಿಯರ 5000 ಹೆಚ್ಚು ನಗ್ನ ದೃಶ್ಯ ಪತ್ತೆ..!

ಕೋಲಾರ : ಶಾಲಾ ಶಿಕ್ಷಕನ ಮೊಬೈಲ್ ನಲ್ಲಿ ವಿದ್ಯಾರ್ಥಿನಿಯರ 5000 ಹೆಚ್ಚು ನಗ್ನ ದೃಶ್ಯಗಳು ಪತ್ತೆಯಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಆತನ ವಿರುದ್ಧ ದಾಖಲಾದ ಎಫ್ ಐ ಆರ್ ರದ್ದತಿಗೆ ಹೈಕೋರ್ಟ್ ನಿರಾಕರಿಸಿದೆ.

ಕೋಲಾರ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದರಲ್ಲಿ ಚಿತ್ರಕಲಾ ಶಿಕ್ಷಕ ಬಾಲಕಿಯರು ಬಟ್ಟೆ ಬದಲಿಸುವ ಸಮಯದ 5000ಕ್ಕೂ ಹೆಚ್ಚು ಫೋಟೋ ಹಾಗೂ ನೂರಾರು ವಿಡಿಯೋ ಸೆರೆಹಿಡಿದ ಆರೋಪವಿತ್ತು. ಪೋಕ್ಸೋ ಕಾಯ್ದೆಯಡಿಯಲ್ಲಿ ಚಿತ್ರಕಲಾ ಶಿಕ್ಷಕನೊಬ್ಬನ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ವಸತಿ ಶಾಲೆಯ ಚಿತ್ರಕಲಾ ಶಿಕ್ಷಕ ಮುನಿಯಪ್ಪ ಎಂಬುವನ ವಿರುದ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಳಾಗಿತ್ತು,ಆರೋಪಿ ಬಳಿ 5 ಮೊಬೈಲ್, ಸಾವಿರಾರು ವಿಡಿಯೋಗಳು ಪತ್ತೆಯಾಗಿತ್ತು. ಪ್ರಕರಣ ರದ್ದು ಮಾಡುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಚಿತ್ರ ಕಲಾ ಶಿಕ್ಷಕನ ಅರ್ಜಿಯನ್ನು ವಜಾಗೊಳಿಸಿದೆ.
ಶಿಕ್ಷಕನ ಕೃತ್ಯವು ನಿಜಕ್ಕೂ ಅಸಭ್ಯ ಹಾಗೂ ಭಯಾನಕವಾಗಿದೆ. ಇಂತಹ ಪ್ರಕರಣ ವನ್ನು ರದ್ದುಪಡಿಸಲಾಗದು ಎಂದಿದೆ. ಫೋಟೋ ಕಾಯ್ದೆ ಸೆಕ್ಷನ್ 11 ಪ್ರಕಾರ, ಮಕ್ಕಳ ದೇಹ ಅಥವಾ ದೇಹದ ಯಾವುದೇ ಭಾಗವನ್ನು ಆಸಭ್ಯ ರೀತಿಯಲ್ಲಿ ಪ್ರದರ್ಶಿಸುವುದು ಲೈಂಗಿಕ ಕಿರುಕುಳವಾಗುತ್ತದೆ ಎಂದು ಹೇಳಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular