HomeInternationalSHOCKING: ಹೆಚ್ಚಿದ ಹೆಣ್ಣು ಮಕ್ಕಳ ಶವದ ಮೇಲೆಯೂ ಅತ್ಯಾಚಾರ ಪ್ರಕರಣ: ಸಮಾಧಿಗೆ ಬೀಗ ಹಾಕಿದ ಪೋಷಕರು

SHOCKING: ಹೆಚ್ಚಿದ ಹೆಣ್ಣು ಮಕ್ಕಳ ಶವದ ಮೇಲೆಯೂ ಅತ್ಯಾಚಾರ ಪ್ರಕರಣ: ಸಮಾಧಿಗೆ ಬೀಗ ಹಾಕಿದ ಪೋಷಕರು

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಆಘಾತಕಾರಿ ಬೆಳವಣಿಗೆ ಬೆಳಕಿಗೆ ಬಂದಿದ್ದು, ಕೆಲವು ಪೋಷಕರು ತಮ್ಮ ಹೆಣ್ಣುಮಕ್ಕಳ ಸಮಾಧಿಗೆ ಕಬ್ಬಿಣದ ಗೇಟ್ ಮಾಡಿಸಿ ಬೀಗ ಹಾಕಿ ಅತ್ಯಾಚಾರಕ್ಕೆ ಒಳಗಾಗದಂತೆ ರಕ್ಷಿಸಲು ಮುಂದಾಗಿದ್ದಾರೆ.

ಈ ಸಮಸ್ಯೆಯನ್ನು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹೈಲೈಟ್ ಮಾಡಿದ್ದಾರೆ. ಮಾಜಿ ಮುಸ್ಲಿಂ ನಾಸ್ತಿಕ ಕಾರ್ಯಕರ್ತ ಹ್ಯಾರಿಸ್ ಸುಲ್ತಾನ್ ಎಂಬ ಅಂತಹ ಬಳಕೆದಾರರೊಬ್ಬರು. ಅವರು, ಪಾಕಿಸ್ತಾನವು ಎಷ್ಟು ಲೈಂಗಿಕವಾಗಿ ಹತಾಶೆಗೊಂಡ ಸಮಾಜವನ್ನು ಸೃಷ್ಟಿಸಿದೆ ಎಂದರೆ ಜನರು ಈಗ ತಮ್ಮ ಹೆಣ್ಣುಮಕ್ಕಳು ಅತ್ಯಾಚಾರಕ್ಕೊಳಗಾಗುವುದನ್ನು ತಡೆಯಲು ಅವರ ಸಮಾಧಿಗಳಿಗೆ ಬೀಗ ಹಾಕುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೆಕ್ರೋಫಿಲಿಯಾ ಪ್ರಕರಣ ಹೆಚ್ಚಳ

ವರದಿಗಳ ಪ್ರಕಾರ ಪಾಕಿಸ್ತಾನದಲ್ಲಿ ದೇಶದಲ್ಲಿ ನೆಕ್ರೋಫಿಲಿಯಾ(ಶವಗಳ ಮೇಲೆ ಲೈಂಗಿಕ ಲಾಲಸೆ) ಪ್ರಕರಣಗಳು ಹೆಚ್ಚುತ್ತಿವೆ. ಕುಟುಂಬ ಆಧಾರಿತ ಮೌಲ್ಯಗಳ ಬಗ್ಗೆ ಹೆಮ್ಮೆಪಡುವ ದೇಶದಲ್ಲಿ ಪ್ರತಿ ಎರಡು ಗಂಟೆಗಳಿಗೊಮ್ಮೆ ಮಹಿಳೆಯೊಬ್ಬಳು ಅತ್ಯಾಚಾರಕ್ಕೊಳಗಾಗುತ್ತಾಳೆ ಎಂಬ ಹಂತಕ್ಕೆ ಬಂದಿದೆ. ಆದರೆ ಹೆಣ್ಣಿನ ಸಮಾಧಿಯ ಮೇಲೆ ಬೀಗ ಹಾಕಿರುವ ಹೃದಯ ವಿದ್ರಾವಕ ದೃಶ್ಯವು ಇಡೀ ಸಮಾಜ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular