ಬೆಂಗಳೂರು: ಉತ್ಪಾದನೆ ಕುಂಠಿತವಾದ ಹಿನ್ನೆಲೆಯಲ್ಲಿ ಕೋಳಿ ಮಾಂಸದ ದರ ಗಣನೀಯ ಏರಿಕೆ ಕಂಡಿದೆ. ತಮಿಳುನಾಡು, ಆಂಧ್ರಪ್ರದೇಶದಲ್ಲಿ ಕೋಳಿ ಸಾಕಾಣಿಕೆದಾರರ ಪ್ರತಿಭಟನೆ ನಡೆಯುತ್ತಿದ್ದು, ಇದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ.
ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ ಬೆಲೆ ಏರಿಕೆಯಾಗಿದೆ. ಡಿಸೆಂಬರ್ ನಲ್ಲಿ ಕೆಜಿಗೆ 240 ರೂ.ವರೆಗೆ ಇದ್ದ ಕೋಳಿ ಮಾಂಸದ ದರ 350 ರೂಪಾಯಿಗೆ ತಲುಪಿದ್ದು, ಕೋಳಿಮಾಂಸಪ್ರಿಯರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಕೂಡ ಖಾದ್ಯ ದರ ಹೆಚ್ಚಾಗಿದೆ.
ಒಂದು ಕೆಜಿ ಬಾಯ್ಲರ್ ಕೋಳಿಗೆ 180 ರೂ., ಫಾರಂ ಕೋಳಿಗೆ 120 ರೂ., ರಿಟೇಲ್ ದರ ಬಾಯ್ಲರ್ ಕೋಳಿಗೆ 290 ರೂ., ವಿತ್ ಸ್ಕಿನ್ 315 ರೂ., ವಿತೌಟ್ ಸ್ಕಿನ್ 340 ರೂ.ವರೆಗೆ ಇದೆ.
ಚಿಕನ್ ದರ ಪ್ರತಿ ಕೆಜಿಗೆ ಗರಿಷ್ಠ 340 ರೂ. ವರೆಗೆ ಏರಿಕೆಯಾಗಿದ್ದು, ಕುರಿ, ಮೇಕೆ ಮಾಂಸದ ದರ ಕೂಡ ಹೆಚ್ಚಾಗಿದೆ. ಪ್ರತಿ ಕೆಜಿಗೆ 800 ರಿಂದ 900 ರೂ.ವರೆಗೆ ಏರಿಕೆಯಾಗಿದೆ. ಮಾಂಸಾಹಾರ ಸೇವನೆ ಮಾಡುವವರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಚಿಕನ್, ಮಟನ್ ಸೇರಿದಂತೆ ಮಾಂಸಗಳ ದರ ಏರಿಕೆಯಿಂದ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಮಾಂಸಾಹಾರ ಖಾದ್ಯಗಳ ದರ ಏರಿಕೆಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

