HomeIndiaಮಾಲ್​ನಲ್ಲಿ ಚಿನ್ನದ ಬಳೆ ಕದ್ದು ಸಿಕ್ಕಿಬಿದ್ದ ಸಾಫ್ಟ್​ವೇರ್​ ಎಂಜಿನಿಯರ್....​!

ಮಾಲ್​ನಲ್ಲಿ ಚಿನ್ನದ ಬಳೆ ಕದ್ದು ಸಿಕ್ಕಿಬಿದ್ದ ಸಾಫ್ಟ್​ವೇರ್​ ಎಂಜಿನಿಯರ್….​!

ಪುಣೆಯ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಉನ್ನತ ಐಟಿ ಇಂಜಿನಿಯರ್ ಚಿನ್ನದ ಬಳೆಯನ್ನು ಕದ್ದ ಆರೋಪ ಎದುರಿಸುತ್ತಿದ್ದಾನೆ! ಮಾರ್ಚ್ 5 ರಂದು ಪುಣೆಯ ಫೋನಿಕ್ಸ್ ಮಾಲ್‌ನಲ್ಲಿ ಚಿನ್ನದ ಬಳೆಯನ್ನು ಕದ್ದ ಆರೋಪ ಈತನ ಮೇಲಿದ್ದು, ಇವನನ್ನು ಬಂಧಿಸಲಾಗಿದೆ.

ಫೋನಿಕ್ಸ್ ಮಾಲ್‌ನಲ್ಲಿರುವ ಬ್ಲೂ ಸ್ಟೋನ್ ಶಾಪ್‌ನಿಂದ ಚಿನ್ನದ ಬಳೆ ಕದಿಯುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಾಲ್‌ನಿಂದ ಸಿಸಿ ಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಟೆಕ್ಕಿಯನ್ನು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

31 ವರ್ಷದ ಟೆಕ್ಕಿ ಅನು ವೇದ್ ಪ್ರಕಾಶ್ ಶರ್ಮಾ ಎಂದು ಗುರುತಿಸಲಾಗಿರುವ ಆರೋಪಿಯು ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಫಿಯೋನಿಕ್ಸ್‌ನಲ್ಲಿ ಇದೇ ರೀತಿಯ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿ ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular