HomeLatest NewsSHOCKING : ರಾಜ್ಯದಲ್ಲಿ ಹೆಚ್ಚುತ್ತಿದೆ ಹೃದಯಾಘಾತ : ಹಾಸನದಲ್ಲಿ ಒಂದೇ ದಿನ 'ಹಾರ್ಟ್ ಅಟ್ಯಾಕ್' ಗೆ...

SHOCKING : ರಾಜ್ಯದಲ್ಲಿ ಹೆಚ್ಚುತ್ತಿದೆ ಹೃದಯಾಘಾತ : ಹಾಸನದಲ್ಲಿ ಒಂದೇ ದಿನ ‘ಹಾರ್ಟ್ ಅಟ್ಯಾಕ್’ ಗೆ ಇಬ್ಬರು ಬಲಿ.!

ಹಾಸನ : ಹಾಸನದಲ್ಲಿ ಒಂದೇ ದಿನ ಇಬ್ಬರು ಮಧ್ಯವಯಸ್ಸಿನವರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಇಬ್ಬರು ಮಧ್ಯ ವಯಸ್ಕರು ಬಲಿಯಾಗಿದ್ದಾರೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮಗ್ಗೆ ಗ್ರಾಮದ ಬಳಿ ಘಟನೆ ನಡೆದಿದೆ. ಮಗ್ಗೆ ಗ್ರಾಮದಿಂದ ಆಲೂರಿಗೆ ನೌಕರ ಬಿ ಆರ್ ನಾಗಪ್ಪ ಪ್ರಯಾಣಿಸುತ್ತಿದ್ದರು. ಈ ವೇಳೆ ಬಸ್ ನಲ್ಲಿ ಹಠಾತ್ ಹೃದಯಾಘಾತ ಕಾಣಿಸಿಕೊಂಡಿದ್ದು, ನಾಗಪ್ಪ (55) ಮೃತಪಟ್ಟಿದ್ದಾರೆ.

ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಮಾಜಿ ನಗರಸಭೆ ಸದಸ್ಯ ನೀಲಕಂಠಪ್ಪ (58) ಅವರು ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹಾಸನ ನಗರದ ಅರಳೆಪೇಟೆ ಬಡಾವಣೆಯಲ್ಲಿ ಘಟನೆ ನಡೆದಿದೆ. ಅವರು ಮನೆಯಲ್ಲಿ ಇದ್ದಾಗಲೇ ಹೃದಯಘಾತ ಕಾಣಿಸಿಕೊಂಡಿದ್ದು, ಕುಸಿದು ಬಿದ್ದು ನೀಲಕಂಠಪ್ಪ ಸಾವನ್ನಪ್ಪಿದ್ದಾರೆ .

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular