ಶಿವಮೊಗ್ಗ: ಮನೆಯ ಬಳಿ ಕಚ್ಚಾ ಬಾಂಬ್ ಸಿಡಿದು ವೃದ್ಧ ಮಹಿಳೆ ಗಾಯಗೊಂಡ ಘಟನೆ ಶನಿವಾರ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ನಂಟೂರು ಗ್ರಾಮದಲ್ಲಿ ನಡೆದಿದೆ.
75 ವರ್ಷದ ಕಮಲಮ್ಮ ಗಾಯಗೊಂಡ ಮಹಿಳೆ. ಮನೆಯ ಅಂಗಳದಲ್ಲಿ ಹರಡಿದ್ದ ಅಡಿಕೆ ಗೋಟು ರಾಶಿಯಲ್ಲಿದ್ದ ಕಚ್ಚಾ ಬಾಂಬ್ ಸಿಡಿದು ಅವರು ಗಾಯಗೊಂಡಿದ್ದು, ಕೈಬೆರಳುಗಳು ಸುಟ್ಟಿವೆ. ಸ್ಪೋಟದ ತೀವ್ರತೆಗೆ ಅವರ ಎಡಗೈನ 5 ಬೆರಳುಗಳಿಗೂ ಹಾನಿಯಾಗಿದ್ದು, ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

