HomeKarnatakaSHOCKING : ರಾಜ್ಯದಲ್ಲಿ ಪೈಶಾಚಿಕ ಕೃತ್ಯ : ಚಲಿಸುತ್ತಿದ್ದ ಬಸ್'ನಲ್ಲೇ ಮಹಿಳೆ ಮೇಲೆ ಲೈಂಗಿಕ...

SHOCKING : ರಾಜ್ಯದಲ್ಲಿ ಪೈಶಾಚಿಕ ಕೃತ್ಯ : ಚಲಿಸುತ್ತಿದ್ದ ಬಸ್’ನಲ್ಲೇ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ.!

ದಾವಣಗೆರೆ : ಚಲಿಸುತ್ತಿದ್ದ ಬಸ್ ನಲ್ಲೇ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಘಟನೆ ಖಾಸಗಿ ಬಸ್ ನಲ್ಲಿ ನಡೆದಿದೆ.

ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಖಾಸಗಿ ಬಸ್ ಚಾಲಕ ಮತ್ತು ನಿರ್ವಾಹಕ ಮತ್ತು ಬಸ್ ಏಜೆಂಟ್ ನಲ್ಲಿ ಅರಸೀಕೆರೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಚನ್ನಾಪುರ ಗ್ರಾಮದ ಬಳಿ ಘಟನೆ ನಡೆದಿದೆ.

ಘಟನೆ ಹಿನ್ನೆಲೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಳಗಾವಿ ಮೂಲದ ಮಹಿಳೆಯೊಬ್ಬರು ಉಚ್ಚಂಗಿದುರ್ಗದ ಉಚ್ಚಂಗೆಮ್ಮನ ಜಾತ್ರೆಗೆ ಬಂದಿದ್ದರು. ಜಾತ್ರೆ ಮುಗಿಸಿಕೊಂಡು ಮಹಿಳೆ ದಾವಣಗೆರೆಗೆ ಹೊರಟಿದ್ದರು. ಬಸ್ ಗಾಗಿ ಮಹಿಳೆ ಮಂಗಳವಾರ ರಾತ್ರಿ ಕಾಯುತ್ತಿದ್ದರು. ಈ ವೇಳೆ ಬನಶಂಕರಿ ಎಂಬ ಹೆಸರಿನ ಖಾಸಗಿ ಬಸ್ ಬಂದಿದ್ದು, ಮಹಿಳೆ ಬಸ್ ಹತ್ತಿದ್ದಾರೆ. ಆ ಬಸ್ ನಲ್ಲಿ ಬರೀ 10 ಮಂದಿ ಪ್ರಯಾಣಿಕರು ಮಾತ್ರ ಇದ್ದರು. ಅವರೆಲ್ಲರೂ ತಮ್ಮ ಸ್ಟಾಪ್ ಬಂದಾಗ ಇಳಿದಿದ್ದಾರೆ. ಬಸ್ ನಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳು ಮಾತ್ರ ಇದ್ದರು. ಇದನ್ನು ನೋಡಿದ ಆರೋಪಿಗಳು ಬಸ್ ನ ರೂಟ್ ಬದಲಾಯಿಸಿದ್ದಾರೆ. ಈ ವೇಳೆ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ. ಕೂಡಲೇ ಮಹಿಳೆ ಕಿರುಚಾಡಿದ್ದು, ಸಾರ್ವಜನಿಕರು ಮಹಿಳೆಯನ್ನು ರಕ್ಷಿಸಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ರಕ್ಷಿಸಿ ಮೂವರು ಆರೋಪಿಗಳನ್ನು ಬಂದಿಸಿದ್ದಾರೆ.

ಬಂಧಿತರನ್ನು ಕೊಟ್ಟೂರು ತಾಲೂಕಿನ ಅಲಬೂರ ನಿವಾಸಿ ಪ್ರಕಾಶ ಮಡಿವಾಳರ (42), ಹರಪನಹಳ್ಳಿ ತಾಲೂಕಿನ ಅರಸೀಕೆರೆ ನಿವಾಸಿಗಳಾದ ಕಂಡಕ್ಟರ್ ರಾಜಶೇಖರ್ (40) ಹಾಗೂ ಬಸ್ ಎಜೆಂಟ್ ಸುರೇಶ್ (46) ಎಂದು ಗುರುತಿಸಲಾಗಿದೆ.

 

 

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular