ಬೆಂಗಳೂರು: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದವರಿಂದ ಕೆಎಸ್ಆರ್ಟಿಸಿ ಬರೋಬ್ಬರಿ 8.08 ಲಕ್ಷ ರೂ. ದಂಡ ವಸೂಲಿ ಮಾಡಿದೆ.
ಬಸ್ ಗಳಲ್ಲಿ ಸಂಚರಿಸುವ ಕೆಲವು ಪ್ರಯಾಣಿಕರು ಟಿಕೆಟ್ ಪಡೆಯುವುದಿಲ್ಲ. ಪಾಸ್ ಇಟ್ಟುಕೊಳ್ಳುವಂತೆ, ಟಿಕೆಟ್ ಪಡೆದುಕೊಳ್ಳುವಂತೆ ನಿರ್ವಾಹಕರು ಹೇಳಿದರೂ ಟಿಕೆಟ್ ಪಡೆದುಕೊಳ್ಳುವುದಿಲ್ಲ. ಇಂತಹ ಪ್ರಯಾಣಿಕರಿಂದ ದಂಡ ವಸೂಲಿ ಮಾಡಲಾಗಿದೆ. ಕೆಎಸ್ಆರ್ಟಿಸಿ ಸಿಬ್ಬಂದಿ ಟಿಕೆಟ್ ಇಲ್ಲದ ಪ್ರಯಾಣಿಕರಿಗೆ ದಂಡ ಹಾಕುತ್ತಾರೆ.
2025ರ ಡಿಸೆಂಬರ್ ನಲ್ಲಿ 8,08,704 ರೂ. ದಂಡ ವಸೂಲಿ ಮಾಡಲಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಕೆಎಸ್ಆರ್ಟಿಸಿ 43,553 ವಾಹನಗಳನ್ನು ತನಿಖೆಗೊಳಪಡಿಸಿತ್ತು. ಇದರಲ್ಲಿ 4207 ಬಸ್ ನಲ್ಲಿದ್ದ ವಸ್ತುಗಳ ಕಳ್ಳತನ ಮಾಡಿದ ಮತ್ತು ಇತರೆ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. 4353 ಟಿಕೆಟ್ ರಹಿತ ಪ್ರಯಾಣ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 8,08,704 ರೂ. ದಂಡ ವಸೂಲಿ ಮಾಡಲಾಗಿದೆ.

