HomeKarnatakaBIG NEWS: ಇದು ಹೆಣ್ಣುಮಕ್ಕಳು ಮಾತನಾಡುವ ಭಾಷೆನಾ? ಶೋಭಾ ಕರಂದ್ಲಾಜೆ ವಿರುದ್ಧ ಸಚಿವ ಭೈರತಿ ಸುರೇಶ್...

BIG NEWS: ಇದು ಹೆಣ್ಣುಮಕ್ಕಳು ಮಾತನಾಡುವ ಭಾಷೆನಾ? ಶೋಭಾ ಕರಂದ್ಲಾಜೆ ವಿರುದ್ಧ ಸಚಿವ ಭೈರತಿ ಸುರೇಶ್ ಕಿಡಿ

ಬೆಂಗಳೂರು: ‘ತಾಕತ್ತಿದ್ದರೆ ಭೈರತಿ ಸುರೇಶ್ ನನ್ನ ವಿರುದ್ಧ ಅಕ್ರಮಗಳ ದಾಖಲೆ ಬಿಡುಗಡೆ ಮಾಡಲಿ’ ಎಂದು ಸವಾಲು ಹಾಕಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಸಚಿವ ಭೈರತಿ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಶೋಭಾ ಕರಂದ್ಲಾಜೆ ನಿನ್ನೆ ಹೇಳಿದ ಮಾತುಗಳನ್ನು ಕೇಳಿದ್ದೇನೆ. ಇದು ಹೆಣ್ಣುಮಕ್ಕಳು ಮಾತನಾಡುವ ಭಾಷೆನಾ? ತಾಕತ್ತು, ದಮ್ಮು…ಎಂತೆಲ್ಲಾ ಸುಸಂಸ್ಕೃತ ಹೆಣ್ಣುಮಕ್ಕಳು ಯಾರಾದರೂ ಮಾತನಾಡುತ್ತಾರಾ? ಎಂದು ಕಿಡಿಕಾರಿದ್ದಾರೆ.

ನಮ್ಮ ದೇಶ ಸುಸಂಸ್ಕೃತ ದೇಶ. ಇಲ್ಲಿನ ಹೆಣ್ಣುಮಕ್ಕಳನ್ನು ನಾವು ಭಾರತ ಮಾತೆ, ಕ್ಷಮಯಾಧರಿತ್ರಿ ಎಂದೆಲ್ಲ ಗೌರವಿಸುತ್ತೇವೆ. ನಮ್ಮ ಸಂಸ್ಕೃತಿಯ ಹೆಣ್ಣುಮಕ್ಕಳು ಮಾತನಾಡುವ ಭಾಷೆ ಬೇರೆಯೇ ಇದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶೋಭಾ ಕರಂದ್ಲಾಜೆ ವಿರುದ್ಧ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಈ ಬಗ್ಗೆ ನಿನ್ನೆಯೇ ಹೇಳಿದ್ದೇನೆ. ಶೀಘ್ರದಲ್ಲಿ ದಾಖಲೆಗಳು ಬಿಡುಗಡೆಯಾಗಲಿವೆ ಎಂದರು.

 

For Latest News Updates, Join Our Whatsapp Community🚩
RELATED ARTICLES

Most Popular