HomeLatest Newsಇನ್ ಸ್ಟಾಗ್ರಾಂ ನಿಂದ ಪತ್ನಿ ಹೆಸರು ತೆಗೆದ ಶೋಯೆಬ್ ಮಲಿಕ್

ಇನ್ ಸ್ಟಾಗ್ರಾಂ ನಿಂದ ಪತ್ನಿ ಹೆಸರು ತೆಗೆದ ಶೋಯೆಬ್ ಮಲಿಕ್

ಮುಂಬೈ: ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ವಿಚ್ಛೇದನ ವಿಚಾರ ಮತ್ತೆ ಸುದ್ದಿಯಾಗಿದೆ. ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಇಬ್ಬರೂ ದಂಪತಿ ಬೇರೆಯಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಈ ಸುದ್ದಿಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಇಬ್ಬರೂ ನಿರಾಕರಿಸಿದ್ದರು. ಇದೀಗ ಇಬ್ಬರ ವಿಚ್ಛೇದನ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಶೋಯೆಬ್ ಮಲಿಕ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯ ಬಯೋದಿಂದ ಸಾನಿಯಾ ಮಿರ್ಜಾ ತಮ್ಮ ಪತ್ನಿ ಎಂಬ ಉಲ್ಲೇಖ ತೆಗೆದುಹಾಕಿದ್ದಾರೆ. ಈ ಹಿಂದೆ ಶೋಯೆಬ್ ತಮ್ಮ ಇನ್ ಸ್ಟಾಗ್ರಾಂ ಬಯೋದಲ್ಲಿ ತಾನು ‘ಸೂಪರ್ ಮಹಿಳೆ ಸಾನಿಯಾ ಮಿರ್ಜಾ ಅವರ ಪತಿ’ ಎಂದು ಬರೆದುಕೊಂಡಿದ್ದರು. ಆದರೆ ಈಗ ಈ ಮಾಹಿತಿ ಎಡಿಟ್ ಮಾಡಿದ್ದು, ಸಾನಿಯಾ ಮಿರ್ಜಾ ಹೆಸರು ಅಳಿಸಿ ಹಾಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಬೆಳವಣಿಗೆ ಬೆನ್ನಲ್ಲೇ ನೆಟ್ಟಿಗರು, ಸಾನಿಯಾ, ಶೋಯೆಬ್ ಜೋಡಿ ಶೀಘ್ರದಲ್ಲಿಯೇ ಬೇರೆ ಬೇರೆಯಾಗಲಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಕಾರಣ ಈ ಹಿಂದೆ ಸೆಲೆಬ್ರಿಟಿ ಜೋಡಿಗಳು ತಮ್ಮ ಇನ್ ಸ್ಟಾಗ್ರಾಂ ಖಾತೆಯಿಂದ ಪಾರ್ಟನರ್ ಗಳ ಫೋಟೋ, ಹೆಸರು ಡಿಲಿಟ್ ಮಾಡಿದ ಕೆಲವೇ ದಿನಗಳಲ್ಲಿ ತಮ್ಮ ವಿಚ್ಛೇದನದ ಬಗ್ಗೆ ಮಾಹಿತಿ ನೀಡುತ್ತಿರುವುದು ಗಮನಕ್ಕೆ ಬರುತ್ತಿದೆ. ಇದೇ ರೀತಿ ಈಗ ಶೋಯೇಬ್ ಕೂಡ ತಮ್ಮ ಪತ್ನಿಯ ಹೆಸರನ್ನು ಇನ್ ಸ್ಟಾದಿಂದ ತೆಗೆದುಹಾಕಿದ್ದಾರಾ ಎಂಬ ಅನುಮಾನ ಮೂಡಿದೆ.

For Latest News Updates, Join Our Whatsapp Community🚩
RELATED ARTICLES

Most Popular