HomeEntertainmentಟಿವಿಕೆ ಎಂದರೆ 'Try Vijay as King' ಎಂದು ಮೊದಲೇ ಹೇಳಿದ್ದೆ, ಅದರಂತೆ ನೀವಿಂದು ರಾಜರಾಗಿದ್ದೀರಿ;...

ಟಿವಿಕೆ ಎಂದರೆ ‘Try Vijay as King’ ಎಂದು ಮೊದಲೇ ಹೇಳಿದ್ದೆ, ಅದರಂತೆ ನೀವಿಂದು ರಾಜರಾಗಿದ್ದೀರಿ; ವಿಜಯ್ ಗೆಲುವಿಗೆ ಶಿವಣ್ಣ ಅಭಿನಂದನೆ

ನಿನ್ನೆ ( ಮೇ 4 ) ತಮಿಳುನಾಡು ರಾಜಕೀಯದಲ್ಲಿ ಮಹತ್ತರವಾದ ಬೆಳವಣಿಗೆಗಳಾಗಿದ್ದು, ವಿಜಯ್ ನೇತೃತ್ವದ ಟಿವಿಕೆ ವಿಧಾನಸಭಾ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

108 ಸೀಟುಗಳನ್ನು ಗೆದ್ದಿರುವ ಟಿವಿಕೆಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಇನ್ನೂ ಹತ್ತು ಸೀಟುಗಳ ಅಗತ್ಯವಿದ್ದು, ವಿಜಯ್ ಯಾವ ಪಕ್ಷದ ಜತೆ ಕೈಜೋಡಿಸಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ.

ಹೀಗೆ ಅನಿರೀಕ್ಷಿತ ಗೆಲುವು ಸಾಧಿಸಿದ ವಿಜಯ್‌ಗೆ ವಿವಿಧ ಕ್ಷೇತ್ರಗಳ ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರುತ್ತಿದ್ದು, ಸಿನಿಮಾ ಕಲಾವಿದರೂ ಸಹ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕನ್ನಡದ ಶಿವರಾಜ್‌ಕುಮಾರ್ ಸಹ ವಿಜಯ್ ಗೆಲುವಿನ ಕುರಿತು ಟ್ವೀಟ್ ಮಾಡಿದ್ದು, ‘ವಿಜಯ್‌ ಅವರೇ ಇದೊಂದು ಅತ್ಯಂತ ಅರ್ಹ ಗೆಲುವು. ಟೀಕಾಪ್ರಹಾರಗಳಾದಾಗ ಮಾತನಾಡದೇ ಇದ್ದು, ನಿಮ್ಮ ಕೆಲಸ ಮಾತನಾಡುವಂತೆ ಮಾಡುವುದು ದೊಡ್ಡ ಗೆಲುವು ಮಾಧ್ಯಮದವರೊಡನೆ ಮಾತನಾಡುವಾಗ ತಮಾಷೆಗಾಗಿ ಟಿವಿಕೆ ಎಂದರೆ Try Vijay as King ಎಂದು ಹೇಳಿದ್ದೆ. ಹಾಗೆಯೇ ನೀವು ಇಂದು ರಾಜನಂತೆ ಎತ್ತರದಲ್ಲಿ ನಿಂತಿದ್ದೀರಿ. ತಮಿಳುನಾಡು ಜನತೆಗೆ ನೀವು ಕೊಟ್ಟ ಆಶ್ವಾಸನೆಗಳನ್ನು ಉಳಿಸಿಕೊಳ್ಳಿ ಹಾಗೂ ಪ್ರಗತಿ ಕಾಣಲಿ ಎಂದು ಆಶಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular