HomeKarnatakaಪತ್ನಿಯೊಂದಿಗೆ ನಡೆದು ಹೋಗುತ್ತಿದ್ದ ವೃದ್ಧನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ: ಡಾನ್ಸ್ ಮಾಡಿ ಅಟ್ಟಹಾಸ ಮೆರೆದ...

ಪತ್ನಿಯೊಂದಿಗೆ ನಡೆದು ಹೋಗುತ್ತಿದ್ದ ವೃದ್ಧನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ: ಡಾನ್ಸ್ ಮಾಡಿ ಅಟ್ಟಹಾಸ ಮೆರೆದ ಪುಡಿರೌಡಿ

ಹಾಸನ: ಪತ್ನಿಯೊಂದಿಗೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ಧನ ಮೇಲೆ ಪುಡಿರೌಡಿಯೊಬ್ಬ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ, ವೃದ್ಧ ಕೆಳಗೆ ಬೀಳುತ್ತಿದ್ದಂತೆ ಡ್ಯಾನ್ಸ್ ಮಾಡಿ ಅಟ್ಟಹಾಸ ಮೆರೆದಿರುವ ಘಟನೆ ಹಾಸನದಲ್ಲಿ ನಡೆದಿದೆ.

ಜಿಲ್ಲೆಯ ಚಿಕ್ಕಬಸವನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವೃದ್ಧನ ಮೇಲೆ ನಡು ರಸ್ತೆಯಲ್ಲಿ ಅಮಾನುಷವಾಗಿ ರೌಡಿಯೊಬ್ಬ ನಡೆಸುತ್ತಿರುವ ಹಲ್ಲೆ ಹಾಗೂ ಡ್ಯಾನ್ಸ್ ಮಾಡಿ ಸಂಭ್ರಮಿಸುತ್ತಿರುವ ವಿಲಕ್ಷಣ ವ್ಯಕ್ತಿತ್ವಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

68 ವರ್ಷದ ತಮ್ಮೇಗೌಡ ಎಂಬುವವರು ತೋಟದಿಂದ ಮನೆಗೆ ತೆರಳುತ್ತಿದ್ದ ವೇಳೆ ಬೋರೇಗೌಡ ಅಲಿಯಾಸ್ ಲೋಕೇಶ್ ಎಂಬ 49 ವರ್ಷದ ವ್ಯಕ್ತಿ ಹಲ್ಲೆ ನಡೆಸಿದ್ದಾನೆ. ತಮ್ಮೇಗೌಡ ವ್ಯಾಪಾರ ಮಾಡಲು ತಮ್ಮ ತೋಟದಲ್ಲಿ ಎಳನೀರು ಕಡೆವಿಕೊಂಡು ಪತ್ನಿಯೊಂದಿಗೆ ಬರುತ್ತಿದ್ದರು. ಈ ವೇಳೆ ಎದುರಾದ ಬೋರೇಗೌಡ ಏಕಾಏಕಿ ಮಚ್ಚನ್ನು ಉಲ್ಟಾ ಮಾಡಿಕೊಂಡು ಥಳಿಸಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನ ಬಂದಂತೆ ರಸ್ತೆಯಲ್ಲಿಯೇ ತಮ್ಮೇಗೌಡರಿಗೆ ಹೊಡೆದಿದ್ದಾನೆ. ಹಲ್ಲೆಗೊಳಗಾದ ತಮ್ಮೇಗೌಡ ನೆಲಕ್ಕೆ ಬಿದ್ದು ಬೇಡಿಕೊಂಡರು ಬಿಡದೆ ಅಮಾನುಷವಾಗಿ ವರ್ತಿಸಿದ್ದಾನೆ. ಪತಿ ಮೇಲೆ ಹಲ್ಲೆ ನಡೆಸಿದ್ದನ್ನು ಕಂಡು ದಂಗಾದ ತಮ್ಮೇಗೌಡರ ಪತ್ನಿ ಭಯದಿಂದ ಓಡಿ ಹೋಗಿದ್ದಾರೆ. ಹಲ್ಲೆಗೊಳಾಗದ ತಮ್ಮೇಗೌಡ ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದಂತೆ ಲೋಕೇಶ್ ಡ್ಯಾನ್ಸ್ ಮಾಡುತ್ತಾ ವಿಕೃತಿ ಮೆರೆದಿದ್ದಾನೆ.

ಅಲ್ಲದೇ ತಮ್ಮೇಗೌಡರ ಪತ್ನಿಯನ್ನು ಹಿಂಬಾಲಿಸಿಕೊಂಡು ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾನೆ. ಅಷ್ಟರಲ್ಲಿ ಆಕೆ ಮನೆಗೆ ಹೋಗಿ ಮನೆಯ ಬಾಗಿಲು ಹಾಕಿಕೊಂಡಿದ್ದಾರೆ. ಮನೆಯ ಕಿಟಕಿಗಳನ್ನು ಪುಡಿ ರೌಡಿ ಒಡೆದು ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ.

ಗಂಭೀರವಾಗಿ ಗಾಯಗೊಂಡಿರುವ ತಮ್ಮೇಗೌಡರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular