HomeKarnatakaಜಾತ್ರೆಗೆ ಬಂದಿದ್ದ ಭಕ್ತರಲ್ಲಿ ವಾಂತಿ-ಭೇದಿ: ಓರ್ವ ಮಹಿಳೆ ಸಾವು

ಜಾತ್ರೆಗೆ ಬಂದಿದ್ದ ಭಕ್ತರಲ್ಲಿ ವಾಂತಿ-ಭೇದಿ: ಓರ್ವ ಮಹಿಳೆ ಸಾವು

ಶಿವಮೊಗ್ಗ: ಜಾತ್ರೆಗೆ ಬಂದಿದ್ದ ನೂರಾರು ಜನರಲ್ಲಿ ಇದ್ದಕ್ಕಿದ್ದಂತೆ ವಾಂತಿ-ಭೇದಿ ಶುರುವಾಗಿದ್ದು, ತೀವ್ರ ಅಸ್ವಸ್ಥಗೊಂಡು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾಅರ್ಗಲ್ ನಲ್ಲಿ ನಡೆದಿದೆ.

ಕಾರ್ಗಲ್​ನಲ್ಲಿ ಕಳೆದ ಎರಡು ದಿನಗಳಿಂದ ವಾಂತಿ-ಭೇದಿಯಿಂದ ಗ್ರಾಮಸ್ಥರು ಬಳಲುತ್ತಿದ್ದಾರೆ. ಇಂದು ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಜಯಲಕ್ಷ್ಮೀ (65) ಸಾವನ್ನಪ್ಪಿದ ಮಹಿಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾರ್ಗಲ್​ನ ಪ್ರಸಿದ್ಧ ಶ್ರೀ ಚೌಡೇಶ್ವರಿ ದೇವಿಯ ಜಾತ್ರೆ ಕಳೆದ ಮೂರು ದಿನಗಳಿಂದ ನಡೆಯುತ್ತಿದೆ. ಇಲ್ಲಿಗೆ ಬಂದಿದ್ದ ಕೆಲ ಭಕ್ತರಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ. ಇದರಲ್ಲಿ ಜಾತ್ರೆಯಲ್ಲಿ ಮಾರಾಟಕ್ಕಿದ್ದ ಐಸ್​ ಕ್ರೀಂ ಹಾಗೂ ಆಲೂಗೆಡ್ಡೆ ಟ್ವಿಸ್ಟರ್​ ತಿಂದು ಅಸ್ವಸ್ಥರಾಗಿರುವವರು ಹೆಚ್ಚು. ಈ ಬಗ್ಗೆ ಅಧಿಕಾರಿಗಳು ಕೂಡ ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಅಲ್ಲಿನ ಎಲ್ಲ ರೀತಿಯ ನೀರುಗಳನ್ನು ಪರೀಕ್ಷಿಸಲಾಗಿದೆ. ಆದರೆ ನೀರಿನಲ್ಲಿ ಯಾವುದೇ ಅಪಾಯ ಕಂಡು ಬಂದಿಲ್ಲ.

ಇದರಿಂದ ಐಸ್ ಕ್ರೀಂ ಹಾಗೂ ಆಲೂ ಟ್ವಿಸ್ಟರ್​ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಸದ್ಯ ಕಾರ್ಗಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಗುಣಮುಖರಾಗಿ ಮನೆಗೆ ತೆರಳಿದ್ದಾರೆಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರಾಜ್ ನಾಯ್ಕ್ ತಿಳಿಸಿದ್ದಾರೆ.

ನೂರಕ್ಕೂ ಹೆಚ್ಚು ಜನರಲ್ಲಿ ವಾಂತಿ – ಭೇದಿ ಕಾಣಿಸಿಕೊಂಡಿತ್ತು. ಮೃತ ಮಹಿಳೆ ಹಾಗೂ ಐವರನ್ನು ಬಿಟ್ಟರೆ ಉಳಿದವರು ಚಿಕಿತ್ಸೆ ಪಡೆದು ವಾಪಸ್​ ಆಗಿ​ದ್ದಾರೆ. ಮೃತ ಮಹಿಳೆಯನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಲುಹಿಸಲಾಗಿತ್ತು ಆದರೆ, ಚಿಕಿತ್ಸೆ ಫಲಿಸದೇ ಜಯಲಕ್ಷ್ಮೀ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular