ಧಾರವಾಡ ಜಿಲ್ಲೆಯಲ್ಲಿ ಗೃಹಬಳಕೆ ಸಿಲೆಂಡರ್ ದಾಸ್ತಾನಿದ್ದು, ಗ್ರಾಹಕರು ಸುಳ್ಳು ವದಂತಿಗಳನ್ನು ನಂಬಬಾರದು. ಗೃಹಬಳಕೆ ಸಿಲೆಂಡರ್ಗಳನ್ನು ವಾಣಿಜ್ಯ ಬಳಕೆಗೆ ಉಪಯೋಗಿಸಬಾರದು. ಸಮಸ್ಯೆಗಳಿದ್ದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಕರೆ ನೀಡಿದ್ದಾರೆ.
ಜಿಲ್ಲೆಯ ಸಾರ್ವಜನಿಕರು, ಗೃಹಬಳಕೆ ಅಡಿಗೆ ಅನಿಲ ಗ್ರಾಹಕರು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಕಿವಿಗೊಡಬಾರದು. ದೇಶಾದ್ಯಂತ ಎಲ್ಪಿಜಿ ಉತ್ಪಾದನೆ ಮತ್ತು ಬಾಟಲಿಂಗ್ ಎರಡೂ ಹೆಚ್ಚಿರುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಸದ್ಯ ಸಿಲೆಂಡರ್ಗಳ ದಾಸ್ತಾನು ಲಭ್ಯವಿದೆ. ಆದ್ದರಿಂದ ಗ್ರಾಹಕರು ಗಾಬರಿಗೊಳ್ಳಬಾರು ಹಾಗೂ ಹೆಚ್ಚುವರಿಯಾಗಿ ಸಿಲೆಂಡರ್ ದಾಸ್ತಾನು ಮಾಡಿಕೊಳ್ಳಬಾರದು ಎಂದು ತಿಳಿಸಿದ್ದಾರೆ.
ಹೆಚ್ಚಿನ ಗ್ರಾಹಕರು ಮುಂಚಿತವಾಗಿ ಬುಕ್ಕಿಂಗ್ ಮಾಡುತ್ತಿರುವುದರಿಂದ ಐವಿಆರ್ಎಸ್, ಮಿಸಡ್ ಕಾಲ್ ಮಾಡುವ ವ್ಯವಸ್ಥೆಯಲ್ಲಿ ಹೆಚ್ಚಿನ ದಟ್ಟಣೆ ಉಂಟಾಗಿ ಸದರಿ ಸಿಸ್ಟಮ್ಗಳು ಕಾರ್ಯನಿರ್ವಹಿಸುತ್ತಿಲ್ಲ.
ಆದ್ದರಿಂದ ಪರ್ಯಾಯವಾಗಿ ಐಒಸಿಎಲ್, ಎಚ್ಪಿಸಿಎಲ್ ಮತ್ತು ಬಿಪಿಸಿಎಲ್ ಎಲ್ಪಿಜಿ ತೈಲ ಕಂಪನಿಗಳು ಗ್ರಾಹಕರಿಗೆ 6 ಬುಕ್ಕಿಂಗ್ ವಿಧಾನಗಳನ್ನು ಕಲ್ಪಿಸಿವೆ. ಪೋರ್ಟಲ್ಗಳು ಮತ್ತು ಪಾವತಿ ಅಪ್ಲಿಕೇಶನ್ಗಳನ್ನು ಗ್ರಾಹಕರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಈ ಸೌಲಭ್ಯಗಳನ್ನು ಬಳಸಬಹುದು.
ಗ್ರಾಹಕರು ಪ್ರತಿ ಗೃಹಬಳಕೆಯ ಸಿಲೆಂಡರ್ ಬುಕ್ ಮಾಡಿ ಪಡೆದುಕೊಂಡ ನಂತರ ಮತ್ತೊಂದು ಗೃಹಬಳಕೆಯ ಸಿಲೆಂಡರ್ ಬೇಡಿಕೆಗಾಗಿ 25 ದಿನಗಳ ನಂತರ ಬುಕ್ ಮಾಡಲು ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಎಲ್ಪಿಜಿ ಸಿಲಿಂಡರ್ಗಳ ಕೊರತೆ ಇರುವುದಿಲ್ಲ. ಆದ್ದರಿಂದ ಸಾರ್ವಜನಿಕರು, ಜಿಲ್ಲೆಯ ಎಲ್ಲಾ ಎಲ್ಪಿಜಿ ಗ್ರಾಹಕರು ಭಯಪಡುವ ಅಗತ್ಯವಿಲ್ಲ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಕರೆ ನೀಡಿದ್ದಾರೆ.
ಒಂದು ವೇಳೆ ಯಾವದೇ ಸಮಸ್ಯೆ ಕಂಡುಬಂದಲ್ಲಿ ಜಿಲ್ಲೆಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ, ಪರಿಹರಿಸಿಕೊಳ್ಳಬಹುದು. ಸಾರ್ವಜನಿಕರು, ಎಲ್ಪಿಜಿ ಗ್ರಾಹಕರು ಸಮಸ್ಯೆಗಳಿದ್ದಲ್ಲಿ ಧಾರವಾಡ ನಗರ (ಸಹಾಯಕ ನಿರ್ದೇಶಕರು 9164603114 ಮತ್ತು ಆಹಾರ ನಿರೀಕ್ಷಕ 8296702244) ಸಂಪರ್ಕಿಸಬಹುದು.
- ಧಾರವಾಡ ಗ್ರಾಮೀಣ (ಆಹಾರ ಶಿರಸ್ತೇದಾರ 9845202400 ಮತ್ತು ಆಹಾರ ನಿರೀಕ್ಷಕ-8310109795, 9844080222)
- ಅಳ್ನಾವರ (ಆಹಾರ ನಿರೀಕ್ಷಕ 9448221892)
- ಹುಬ್ಬಳ್ಳಿ ನಗರ (ಸಹಾಯಕ ನಿರ್ದೇಶಕ 9035074105 ಮತ್ತು ಆಹಾರ ನಿರೀಕ್ಷಕ 7618760734, 9141266510, 8147744685)
- ಹುಬ್ಬಳ್ಳಿ ಗ್ರಾಮೀಣ (ಆಹಾರ ನಿರೀಕ್ಷಕ 9482532326)
- ಕಲಘಟಗಿ ತಾಲ್ಲೂಕು (ಆಹಾರ ನಿರೀಕ್ಷಕ 6364304842)
- ಕುಂದಗೋಳ ತಾಲ್ಲೂಕು (ಆಹಾರ ನಿರೀಕ್ಷಕರ 9448324052)
- ಅಣ್ಣಿಗೇರಿ ತಾಲ್ಲೂಕು (ಆಹಾರ ಶಿರಸ್ತೇದಾರ 9620734505)
- ನವಲಗುಂದ ತಾಲ್ಲೂಕು (ಆಹಾರ ನಿರೀಕ್ಷಕರ 8694971257)
- ಜಂಟಿ ನಿರ್ದೇಶಕರ ಕಛೇರಿಯ ದೂರವಾಣಿ ಸಂಖ್ಯೆ 0836-2444594
ಗೃಹಬಳಕೆ ಸಿಲೆಂಡರ್ಗಳನ್ನು ವಾಣಿಜ್ಯ ಬಳಕೆಗೆ ಉಪಯೋಗಿಸಬಾರದು. ಅಲ್ಲದೇ ಸಿಲೆಂಡರ್ಗಳನ್ನು ಅನಧಿಕೃತವಾಗಿ ಸಂಗ್ರಹಿಸಿ ಒಂದು ಸಿಲೆಂಡರ್ನಿಂದ ಮತ್ತೊಂದು ಸಿಲೆಂಡರ್ಗೆ ವರ್ಗಾಯಿಸುವದು ಅಪರಾಧವಾಗಿರುತ್ತದೆ.
ಅಂತಹ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಿಸಿದ ಆಹಾರ ನಿರೀಕ್ಷಕರ ದೂರವಾಣಿಗಳಿಗೆ ಮಾಹಿತಿ ನೀಡಲು ಸಹ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

