HomeLatest Newsಶಿವಮೊಗ್ಗ ಏರ್ ಪೋರ್ಟ್ ಆವರಣದಲ್ಲಿ ಕರಡಿ ಪ್ರತ್ಯಕ್ಷ: ಅರಣ್ಯ ಇಲಾಖೆ ಸಿಬ್ಬಂದಿಯಿಂದ ಸೆರೆ

ಶಿವಮೊಗ್ಗ ಏರ್ ಪೋರ್ಟ್ ಆವರಣದಲ್ಲಿ ಕರಡಿ ಪ್ರತ್ಯಕ್ಷ: ಅರಣ್ಯ ಇಲಾಖೆ ಸಿಬ್ಬಂದಿಯಿಂದ ಸೆರೆ

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣದ ಆವರಣದಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿದ್ದು, ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ.

ಶಿವಮೊಗ್ಗ ತಾಲೂಕು ವಿನಾಯಕನಗರ ಗ್ರಾಮದ ಬಳಿ ಸುಮಾರು 7 ವರ್ಷದ ಕರಡಿಯೊಂದು ಕಾಣಿಸಿಕೊಂಡಿದೆ. ತಕ್ಷಣ ಗ್ರಾಮಸ್ಥರು ಉಂಬ್ಳೆಬೈಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕಾರ್ಯಪ್ರವೃತ್ತರಾದ ಅರಣ್ಯಾಧಿಕಾರಿಗಳು ಕರಡಿ ಸೆರೆಗೆ ಬಲೆ ಬಿಸಿದ್ದಾರೆ.

ಕರಡಿ ವಿನಾಯಕ ನಗರ ಗ್ರಾಮದಿಂದ ಪಕ್ಕದ ಏರ್ಪೋರ್ಟ್​​ ಒಳಗೆ ನುಗ್ಗಿದೆ. ನಂತರ ಅಲ್ಲಿನ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಕರಡಿಯನ್ನು ಓಡಿಸಿಕೊಂಡು ಹೋದ ಪರಿಣಾಮ ಅದು ಪುನಃ ಕಾಂಪೌಂಡ್ ಹಾರಿ ಹೊರಗೆ ಹಾರಿ ಜ್ಯೋತಿನಗರದ ಅಂಗನವಾಡಿ ಬಳಿ ಓಡಿದೆ. ತಕ್ಷಣ ಸಕ್ರೆಬೈಲು ಆನೆ ಬಿಡಾರದ ಪಶು ವೈದ್ಯ ಡಾ. ಮುರುಳಿ ಮನೋಹರ್ ಅವರು ತಮ್ಮ ಗನ್​ನಿಂದ ಕರಡಿಗೆ ಅರವಳಿಕೆ‌ ಚುಚ್ಚು ಮದ್ದು ನೀಡಿದರು. ಇದರಿಂದ ಕರಡಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳು ಕರಡಿಯನ್ನು ಸೆರೆ ಹಿಡಿದು, ಶಿವಮೊಗ್ಗದ ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಸ್ಥಳಾಂತರಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular