HomeKarnatakaಎಣ್ಣೆ ಕೊಡಲ್ಲ ಎಂದಿದ್ದಕ್ಕೆ ಹೆದ್ದಾರಿ ತಡೆದು ಹುಚ್ಚಾಟ ಮೆರೆದ ಯುವಕ; ವಾಹನ ಸವಾರರ ಪರದಾಟ

ಎಣ್ಣೆ ಕೊಡಲ್ಲ ಎಂದಿದ್ದಕ್ಕೆ ಹೆದ್ದಾರಿ ತಡೆದು ಹುಚ್ಚಾಟ ಮೆರೆದ ಯುವಕ; ವಾಹನ ಸವಾರರ ಪರದಾಟ

ಶಿವಮೊಗ್ಗ: ಅಂಗಡಿಯಲ್ಲಿ ಹಣ ನೀಡದೇ ಮದ್ಯ ಕೊಡಲ್ಲ ಎಂದಿದ್ದಕ್ಕೆ ರೊಚ್ಚಿಗೆದ್ದ ಯುವಕನೊಬ್ಬ ಹೆದ್ದಾರಿ ತಡೆದು ಅವಾಂತರ ಸೃಷ್ಟಿಸಿದ ಘಟನೆ ಶಿವಮೊಗ್ಗದ ಎನ್.ಟಿ. ರಸ್ತೆಯಲ್ಲಿ ನಡೆದಿದೆ.

ಮದ್ಯದ ಅಂಗಡಿಗೆ ತೆರಳಿದ್ದ ಯುವಕನಿಗೆ ಅಂಗಡಿಯವರು ಫ್ರೀಯಾಗಿ ಮದ್ಯ ಕೊಡಲು ನಿರಾಕರಿಸಿದ್ದಾರೆ. ಹಣ ಕೊಟ್ಟರಷ್ಟೇ ಎಣ್ಣೆ ಕೊಡುವುದಾಗಿ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಯುವಕ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಲ್ಲಿ ರಸ್ತೆಗೆ ಬಂದು ಕೊಡೆ ಹಿಡಿದು ನಿಂತಿದ್ದಾನೆ.

ಮಧ್ಯೆ ರಸ್ತೆಯಲ್ಲಿ ನಿಂತು ಅವಾಂತರ ಸೃಷ್ಟಿಸಿದ್ದಾನೆ. ಇದರಿಂದಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಸ್, ಕಾರು, ವಾಹನಗಳು ಸಾಲುಗಟ್ಟಿ ನಿಂತರೂ ಯುವಕ ರಸ್ತೆಯಿಂದ ಕದಲಿಲ್ಲ. ಬಸ್ ಕಂಡಕ್ಟರ್ ಗಳು ಆತನನ್ನು ರಸ್ತೆ ಬದಿ ಎಳೆದೊಯ್ದು ಬುದ್ಧಿ ಹೇಳಿದರೂ ಯುವಕ ಹುಚ್ಚಾಟ ಮುಂದುವರೆಸಿದ್ದ. ಕೆಲ ಸಮಯದ ಬಳಿಕ ಸ್ಥಳೀಯರು ಯುವಕನಿಗೆ ಬೆದರಿಸಿ ರಸ್ತೆಯಲ್ಲಿ ನಿಲ್ಲದಂತೆ ಹೇಳಿ ಕರೆದೊಯ್ದಿದ್ದಾರೆ. ಬಳಿಕ ಸ್ಥಳದಲ್ಲಿ ವಾಹನ ಸಂಚಾರ ಸುಗಮವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular