HomeKarnatakaಕಾರ್ಮಿಕನ ಮೇಲೆ ಹರಿದುಹೋದ ರೈಲು: ಸ್ಥಳದಲ್ಲೇ ದುರ್ಮರಣ

ಕಾರ್ಮಿಕನ ಮೇಲೆ ಹರಿದುಹೋದ ರೈಲು: ಸ್ಥಳದಲ್ಲೇ ದುರ್ಮರಣ

ಶಿವಮೊಗ್ಗ: ಸೌದೆ ಆರಿಸಲು ಹೋಗಿದ್ದ ಕಾರ್ಮಿಕ ರೈಲಿನಡಿ ಸಿಲುಕಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ವಿದ್ಯಾನಗರದ ಬಳಿ ನಡೆದಿದೆ.

ರುದ್ರಪ್ಪ (68) ಮೃತ ದುರ್ದೈವಿ. ರೈಲ್ವೆ ಹಳಿ ಬಳಿ ಸೌದೆ ಆರಿಸುತ್ತಿದ್ದ ವೇಳೆ ರೈಲು ಬಂದಿದ್ದು ಗೊತ್ತಾಗಿಲ್ಲ. ವೇಗವಾಗಿ ಬಂದ ಮೈಸೂರು-ತಾಳಗುಪ್ಪ ರೈಲು ರುದ್ರಪ್ಪ ಮೇಲೆ ಹರಿದು ಹೋಗಿದೆ. ರುದ್ರಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ರುದ್ರಪ್ಪ ಕಿವುಡು ಹಾಗೂ ಕುಣ್ಣು ಮಂಜಿನಿಂದ ಬಳಲುತ್ತಿದ್ದರು. ಹಾಗಾಗಿ ರೈಲಿನ ಶಬ್ಧವೂ ಕೇಳಿಲ್ಲ, ರೈಲು ಬಂದಿದ್ದು ಕಾಣದೇ ರೈಲಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular